ಮಳೆಗಾಲದಲ್ಲೇ ಬಿಸಿಲಿನ ಧಗೆ: ಉಪ್ಪಳದಲ್ಲಿ ನೀರಿನ ಮಟ್ಟ ಕುಸಿತ

ಮಂಜೇಶ್ವರ: ಸಾಮಾನ್ಯವಾಗಿ ಉಕ್ಕಿ ಹರಿಯಬೇಕಿದ್ದ ಮಳೆಗಾಲದಲ್ಲೇ ಬಿಸಿಲಿನ ಧಗೆ ಹೆಚ್ಚಾಗಿದ್ದು, ಉಪ್ಪಳ ಹಾಗೂ ಸುತ್ತಮುತ್ತಲಿನ ನದಿ, ಕೆರೆ ಮತ್ತು ಬಾವಿಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಈ ಹಠಾತ್ ಹವಾಮಾನ ಬದಲಾವಣೆಯು ಸ್ಥಳೀಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

​ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮಂಗಲ್ಪಾಡಿ, ಮಂಜೇಶ್ವರ, ಮೀಂಜ ಹಾಗೂ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ.

ಭತ್ತದ ಬೆಳೆಯನ್ನು ಬಚಾವ್ ಮಾಡಲು ಗದ್ದೆಗಳಿಗೆ ಕೆರೆಯ ನೀರುಣಿಸುವ ಅನಿವಾರ್ಯತೆ ಎದುರಾಗಿದೆ. ಅಡಿಕೆ ಹಾಗೂ ತೆಂಗು ಬೆಳೆಗಾರರೂ ಕಂಗಾಲಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಶೀಘ್ರದಲ್ಲೇ ಭೀಕರ ಕುಡಿಯುವ ನೀರಿನ ಅಭಾವ ಎದುರಾಗುವ ಭೀತಿ ಆವರಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!