ಕಾಸರಗೋಡು: ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಶ್ರೀಧನ್ಯ ಸುರೇಶ್, I.A.S. ಅವರನ್ನು ಪೆರ್ಲದ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ನಿಯೋಗವು ಭೇಟಿಯಾಗಿ ಅಭಿನಂದಿಸಿ, ಗೌರವಪೂರ್ವಕವಾಗಿ ಸನ್ಮಾನಿಸಿತು. ಈ ಸಂದರ್ಭದಲ್ಲಿ ಮರಾಟಿ ಪರಿಶಿಷ್ಟ ಪಂಗಡದ ಹಾಗೂ ಪೆರ್ಲ ಪ್ರದೇಶದ ವಿವಿಧ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.

1953 ರಲ್ಲಿ ಅಂದಿನ ಮದ್ರಾಸ್ ಸರ್ಕಾರದ ನೆರವಿನಿಂದ ಆರಂಭಗೊಂಡ ಪೆರ್ಲದ ಐತಿಹಾಸಿಕ ‘ಮರಾಟಿ ಬೋರ್ಡಿಂಗ್ ಹಾಲ್’ನ ಇತಿಹಾಸ ಹಾಗೂ ಪ್ರಸ್ತುತ ನಡೆಯುತ್ತಿರುವ ಕಲ್ಯಾಣ ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ ಮನವಿ ಪತ್ರವನ್ನು ನಿಯೋಗವು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿತು. ಮರಾಟಿ ಪರಿಶಿಷ್ಟ ಪಂಗಡದ ಪಾರಂಪರಿಕ ಕೇಂದ್ರವಾಗಿರುವ ಈ ಬೋರ್ಡಿಂಗ್ ಹಾಲ್ ಮೂಲಕ ಶಾರದಾ ಮರಾಟಿ ಮಹಿಳಾ ವೇದಿಕೆ ಹಾಗೂ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಸಂಸ್ಕೃತಿ ಸಂರಕ್ಷಣೆ, ಉಚಿತ ವೈದ್ಯಕೀಯ ಶಿಬಿರಗಳು, ಶಿಕ್ಷಣ ಪ್ರೋತ್ಸಾಹ, ಸಿ.ಪಿ.ಆರ್ ತರಬೇತಿ, ಧನಸಹಾಯ ವಿತರಣೆ ಮತ್ತು ವಿಪತ್ತು ಪರಿಹಾರ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವರ ನೀಡಲಾಯಿತು.
ಇದೇ ಸಂದರ್ಭದಲ್ಲಿ ಪೆರ್ಲದಲ್ಲಿರುವ ಪಾರಂಪರಿಕ ಮರಾಟಿ ಬೋರ್ಡಿಂಗ್ ಹಾಲ್‌ಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿಯೋಗವು ಆತ್ಮೀಯ ಆಹ್ವಾನ ನೀಡಿತು.

ನಿಯೋಗದಲ್ಲಿದ್ದ ಪ್ರಮುಖರು:
- ಡಾ. ಬಿ. ಜಿ. ನಾಯ್ಕ್ ಅಧ್ಯಕ್ಷರು, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ (ಆರ್), ಪೆರ್ಲ)
- ಶ್ರೀಮತಿ ಪುಷ್ಪ ಅಮೇಕ್ಕಳ (ಅಧ್ಯಕ್ಷರು, ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ (ಆರ್), ಪೆರ್ಲ)
- ಶ್ರೀಮತಿ ಕುಸುಮಾವತಿ ಟೀಚರ್ (ಅಧ್ಯಕ್ಷರು, ಎಣ್ಮಕಜೆ ಗ್ರಾಮ ಪಂಚಾಯತ್, ಪೆರ್ಲ)
ಶ್ರೀಮತಿ ಗೋಪಿಕೃಷ್ಣ ಬದಿಯಡ್ಕ ಕಾರ್ಯದರ್ಶಿ - ಡಾ. ಬಿ. ನಾರಾಯಣ ನಾಯ್ಕ್ (ಮ್ಯಾನೇಜಿಂಗ್ ಟ್ರಸ್ಟಿ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ನಿವೃತ್ತ ಹಿರಿಯ ಮಕ್ಕಳ ವೈದ್ಯರು)
- ಶ್ರೀ ಸಿ. ಎಚ್. ಗೋವಿಂದ ನಾಯ್ಕ್ (ಸಮುದಾಯದ ಮುಖಂಡರು ಹಾಗೂ ಪೆರ್ಲ ಮರಾಠಿ ಬೋರ್ಡಿಂಗ್ ಹಾಲ್ ಮೇಲ್ವಿಚಾರಕರು)
- ಶ್ರೀ ಜಗದೀಶ್ ನಾಯ್ಕ್ ಕೋಶಾದಿಕಾರಿ ಶ್ರೀ ಶಾರದ ಮರಾಟಿ ಸಮಾಜ ಸೇವಾ ಸಂಘ ಪೆರ್ಲ
- ಶ್ರೀ ಬಾಲಕೃಷ್ಣ ನಾಯ್ಕ್ ಸದಸ್ಯರು, ಶ್ರೀ ಶಾರದಾ ಮರಾಠಿ ಸಮಾಜ ಸೇವಾ ಸಂಘ, ಪೆರ್ಲ


