ಸೆ.27ರಂದು ಮಂಗಳೂರಿನಲ್ಲಿ ‘ಕೋಟದವರ ಹಬ್ಬ

ಮಂಗಳೂರು: ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಕೇಂದ್ರ ಸಂಸ್ಥೆಯ ಕೇಂದ್ರ ಮಹಾಧಿವೇಶನ ‘ಕೋಟದವರ ಹಬ್ಬ’ ಹಾಗೂ 73ನೇ ವಾರ್ಷಿಕ ಮಹಾಸಭೆ ಸೆ.27ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಲಿದೆ ಎಂದು ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆ ಅಧ್ಯಕ್ಷ ಶ್ರೀಧರ ಹೊಳ್ಳ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9.45ಕ್ಕೆ ಕೋಟ ವಾಸುದೇವ ಕಾರಂತ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರಾಧ್ಯಕ್ಷ ಎಚ್. ಸತೀಶ್ ಹಂದೆ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್ ಮಹಾಧಿವೇಶನ ಉದ್ಘಾಟಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಮಹಾಧಿವೇಶನದ ಅಂಗವಾಗಿ ‘ನರಸಿಂಹ ಪ್ರಭಾ’ ಸ್ಮರಣ ಸಂಚಿಕೆ ಬಿಡುಗಡೆ, ವಿದ್ವತ್ ಸನ್ಮಾನ, ‘ದಶಾವತಾರ’ ನೃತ್ಯರೂಪಕ ಹಾಗೂ ಯುವ ಸಮೂಹಕ್ಕಾಗಿ ‘ಭವಿಷ್ಯದತ್ತ ಒಂದು ಹೆಜ್ಜೆ’ ಸಂವಾದ ಕಾರ್ಯಕ್ರಮ ನಡೆಯಲಿದೆ. ವಿವಿಧ ಅಂಗಸಂಸ್ಥೆಗಳ ಸುಮಾರು 250 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸರಿಗಮಪ ಖ್ಯಾತಿಯ ಕೀರ್ತನ್ ಹೊಳ್ಳ ಅವರಿಂದ ಗಾನ ಲಹರಿ ಕಾರ್ಯಕ್ರಮವೂ ಆಯೋಜಿಸಲಾಗಿದೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆ ಪ್ರಮುಖರಾದ ನ್ಯಾಯವಾದಿ ಸದಾಶಿವ ಐತಾಳ, ಪ್ರಭಾಕರ ಐತಾಳ, ಗೋಪಾಲಕೃಷ್ಣ ಮಯ್ಯ, ಪದ್ಮನಾಭ ಮಯ್ಯ, ಪ್ರಭಾ ಎಸ್. ರಾವ್, ಲಲಿತಾ ಉಪಾಧ್ಯಾಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!