ಮಂಜೇಶ್ವರ : ಬಡಾಜೆ ಪಾಪಿಲದಲ್ಲಿರುವ ‘ಪಾಪಿಲ ಇಂಟರ್ ಲಾಕಿಂಗ್ ಕಾಂಕ್ರೀಟ್ ಬ್ರಿಕ್ಸ್’ ಸಂಸ್ಥೆಯಲ್ಲಿ ಸೆಪ್ಟೆಂಬರ್ 11 ರಿಂದ 22 ರ ನಡುವೆ ಭಾರೀ ಕಳವು ನಡೆದಿದೆ. ಸಂಸ್ಥೆಗೆ ಅಕ್ರಮವಾಗಿ ನುಗ್ಗಿದ ಖದೀಮರು, ಬ್ರಿಕ್ಸ್ ತಯಾರಿಕೆಗೆ ಬಳಸುವ ಎರಡು 5 ಹೆಚ್ ಪಿ ಮೋಟಾರ್‌ಗಳು, ಎರಡು ಅಚ್ಚುಗಳು, ಸೀಲಿಂಗ್ ಫ್ಯಾನ್ ಹಾಗೂ ಗ್ಯಾಸ್ ಸಿಲಿಂಡರ್‌ಗಳನ್ನು ಎಗರಿಸಿದ್ದಾರೆ.

ಅಷ್ಟೇ ಅಲ್ಲದೆ, ವಿದ್ಯುತ್ ವೈರ್‌ಗಳನ್ನು ತುಂಡರಿಸಿ ಅದರೊಳಗಿದ್ದ ತಾಮ್ರದ ತಂತಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದರಿಂದ ಒಟ್ಟು ರೂ.4,30,000 ನಷ್ಟ ಸಂಭವಿಸಿದೆ ಎಂದು ಮಾಲೀಕ ಅಶ್ರಫ್ ಕೆ. ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಾ ಕಳ್ಳರಿಗಾಗಿ ಜಾಲ ಬೀಸಿದ್ದಾರೆ.

