ಖಲ್ಬಿಲುಂಡು ಎಂಟೆ ನಬಿ (ಸ.ಅ)ಎಸ್‌ವೈಎಸ್ ಉಪ್ಪಳ ಝೋನ್ ‘ಸ್ನೇಹ ಲೋಕ’ ಕಾರ್ಯಕ್ರಮಕ್ಕೆ ಇಂದು ಧ್ವಜಾರೋಹಣ

ಬಂದ್ಯೋಡ್ : ‘ಸಮಸ್ತ ನೂರ್ ಪ್ರಕಾಶ ವರ್ಷಗಳು’ ಎಂಬ ವಿಷಯದಡಿ ನಡೆಯುತ್ತಿರುವ ಸಮಸ್ತ ಸೆಂಟಿನರಿ ಕಾರ್ಯಕ್ರಮಗಳ ಭಾಗವಾಗಿ ಎಸ್‌ವೈಎಸ್ ಉಪ್ಪಳ ಝೋನ್ ಆಯೋಜಿಸಿರುವ ‘ಸ್ನೇಹ ಲೋಕ’ ಕಾರ್ಯಕ್ರಮಕ್ಕೆ ಇಂದು ಧ್ವಜಾರೋಹಣ ನಡೆಯಲಿದೆ.

ಇಂದು (ಸೆಪ್ಟೆಂಬರ್ 26) ಸಂಜೆ 3 ಗಂಟೆಗೆ ಇಚ್ಚಿಲಂಕೋಡು ಮತ್ತು ಪಚ್ಚಂಬಳ ಮಖಾ ಸಿಯಾರತ್ ನಡೆಯಲಿದೆ. ಸಂಜೆ 4.30ಕ್ಕೆ ತಾಜುಶರೀಅಃ ಮಖಾ ಸಿಯಾರತ್ ನಡೆಯಲಿದೆ. ಬಳಿಕ ಸ್ನೇಹ ಲೋಕ ನಗರಿಯತ್ತ ಧ್ವಜ ಜಾಥಾ ನಡೆಯಲಿದೆ. ಸಂಜೆ 5 ಗಂಟೆಗೆ ಸ್ವಾಗತ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಮುತ್ತಂ ಧ್ವಜಾರೋಹಣ ನೆರವೇರಿಸಲಿದ್ದಾರೆ.

ನಾಳೆ (ಸೆಪ್ಟೆಂಬರ್ 27) ಬೆಳಗ್ಗೆ 9 ಗಂಟೆಗೆ ನೋಂದಣಿ ಆರಂಭವಾಗಲಿದೆ. ಬೆಳಗ್ಗೆ 9.30ಕ್ಕೆ ನಡೆಯುವ ಮೌಲಿದ್ ಸಭೆಗೆ ಯಹ್ಯಾ ಸಅದಿ ನೇತೃತ್ವ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಝೋನ್ ಅಧ್ಯಕ್ಷ ಸಯ್ಯಿದ್ ಯಾಸೀನ್ ಉಬೈದುಲ್ಲಾ ಸಅದಿ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಉಪಾಧ್ಯಕ್ಷ ಖುದ್ವತುಸ್ಸಾದಾತ್ ಸಯ್ಯಿದ್ ಕೆ.ಎಸ್. ಅಟ್ಟಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಸಖಾಫಿ ಬಾಯಾರ್ ಪರಿಚಯ ಭಾಷಣ ಮಾಡಲಿದ್ದಾರೆ. ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುಹಮ್ಮದ್, ಝೋನ್ ಅಧ್ಯಕ್ಷ ಅಲಂಕಾರ್ ಮುಹಮ್ಮದ್ ಹಾಜಿ, ಎಸ್‌ಎಂಎ ಝೋನ್ ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ, ಅಬ್ದುಲ್ ರಶೀದ್ ಅಮಾನಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

‘ಖಲ್ಬಿಲುಂಡು ಎಂಟೆ ನಬಿ’ ಸೆಷನ್‌ಗೆ ಸಮಸ್ತ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ನೇತೃತ್ವ ನೀಡಲಿದ್ದಾರೆ. ಬಳಿಕ ನಡೆಯುವ ವಿವಿಧ ಸೆಷನ್‌ಗಳಿಗೆ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್ ಬಖಾರಿ, ದೇವರ್ಷೋಲ ಅಬ್ದುಲ್ ಸಲಾಂ ಮುಸ್ಲಿಯಾರ್, ಸಿ.ಕೆ. ರಾಶಿದ್ ಬಖಾರಿ, ಅಬ್ದುಲ್ ಹಕೀಂ ಸಖಾಫಿ ಅರಿಯಿಲ್, ರಶೀದ್ ನರಿಕೋಡ್ ಹಾಗೂ ಇಬ್ರಾಹಿಂ ಸಖಾಫಿ ಪುಝಕ್ಕಟ್ಟಿರಿ ನೇತೃತ್ವ ನೀಡಲಿದ್ದಾರೆ.

ಸಂಜೆ 5.30ಕ್ಕೆ ನಡೆಯುವ ಕವ್ವಾಲಿ ಕಾರ್ಯಕ್ರಮಕ್ಕೆ ಟೀಂ ಎಸ್‌ಎಸ್‌ಎಫ್ ಉಪ್ಪಳ ನೇತೃತ್ವ ನೀಡಲಿದೆ. ಮಗ್ರಿಬ್ ನಮಾಜಿನ ಬಳಿಕ ನಡೆಯುವ ಬುರ್ಡಾ ಮಜ್ಲಿಸ್‌ಗೆ ಹಾಫಿಜ್ ಅನ್ವರ್ ಅಲಿ ಸಖಾಫಿ ಹಾಗೂ ತಂಡ ನೇತೃತ್ವ ನೀಡಲಿದೆ.

ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಸ್ತ ಜಿಲ್ಲಾ ಮುಶಾವರ ಸದಸ್ಯ ಮುಹಮ್ಮದಲಿ ಅಹ್ಸನಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಬ್ದುಲ್ ಸಲಾಂ ದಾರಿಮಿ ಕುಬನೂರು ಉದ್ಘಾಟಿಸಲಿದ್ದಾರೆ. ಅನಸ್ ಸಿದ್ದೀಖಿ ಪರಿಚಯ ಭಾಷಣ ಮಾಡಲಿದ್ದು, ಹಂಝ ಮಿಸ್ಬಾಹಿ ಓಟ್ಟಪ್ಪಡವ್ ಮುಖ್ಯ ಭಾಷಣ ಮಾಡಲಿದ್ದಾರೆ.

ಕೇರಳ ಮುಸ್ಲಿಂ ಜಮಾಅತ್ ಝೋನ್ ಪ್ರಧಾನ ಕಾರ್ಯದರ್ಶಿ ಯೂಸುಫುಲ್ ಫಾಳಿಲಿ, ಎಸ್‌ಎಂಎ ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಲತೀಫಿ, ಎಸ್‌ವೈಎಸ್ ಜಿಲ್ಲಾ ಹಣಕಾಸು ಕಾರ್ಯದರ್ಶಿ ತಾಜುದ್ದೀನ್ ಮಾಸ್ಟರ್, ಜಿಲ್ಲಾ ಕಾರ್ಯದರ್ಶಿ ಫಾರೂಖ್ ಕುಬನೂರು, ಯೂಸುಫ್ ಸಖಾಫಿ ಕಣಿಯಾಲ, ಮೂಸ ಸಖಾಫಿ ಪೈವಳಿಕೆ, ಎಸ್‌ಎಸ್‌ಎಫ್ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಟ್ಟಗೋಳಿ ಹಾಗೂ ಡಿವಿಷನ್ ಕಾರ್ಯದರ್ಶಿ ನಾಸರ್ ಬೆಕೂರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.ಶಾಫಿ ಸಅದಿ ಸ್ವಾಗತಿಸಲಿದ್ದು, ಸವಾದ್ ಸಖಾಫಿ ವಂದಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ,ಹನೀಫ್ ಹಾಜಿ ಮುತ್ತಂ ,ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ರಹೀಂ ಸ್ವಾಬಿರಿ ,ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶಾಫಿ ಸಅದಿ ಶಿರಿಯ ,
ಸವಾದ್ ಸಖಾಫಿ ,ನಸೀರ್ ಶಿರಿಯ ಕುನ್ನಿಲ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!