ಮಂಜೇಶ್ವರ : ವಿಟ್ಲ ವ್ಯಾಪ್ತಿಯ ಕಾಲೇಜೊಂದರಲ್ಲಿ ಪಿಯುಸಿ ಅಭ್ಯಾಸ ಮಾಡುತ್ತಿದ್ದ ಬಾಲಕಿ ಸೆಪ್ಟೆಂಬರ್ 8ರಂದು ತರಗತಿಯಲ್ಲೇ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ, ಕಾಲೇಜು ಆಡಳಿತ ಮಂಡಳಿ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿತ್ತು. ತಪಾಸಣೆ ನಡೆಸಿದ ವೈದ್ಯರು ಬಾಲಕಿ ಪೂರ್ಣ ಗರ್ಭಿಣಿ ಎಂದು ಸ್ಪಷ್ಟಪಡಿಸಿದ್ದು, ಅದೇ ದಿನ ಆಕೆ ಮಗುವಿಗೆ ಜನ್ಮ ನೀಡಿದ್ದಳು.

ಆಸ್ಪತ್ರೆ ನೀಡಿದ ಮಾಹಿತಿಯನ್ನಾಧರಿಸಿ ವಿಟ್ಲ ಪೊಲೀಸರು ಬಾಲಕಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಬಾಲಕಿ ಹಾಗೂ ಆಕೆಯ ನಿಕಟ ಸಂಬಂಧಿ ಅಪ್ರಾಪ್ತ ಯುವಕ ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ.

ಘಟನೆ ನಡೆದ ಸ್ಥಳ ಮತ್ತು ಆರೋಪಿ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿರುವುದರಿಂದ, ವಿಟ್ಲ ಪೊಲೀಸರು ಮುಂದುವರಿದ ತನಿಖೆಗಾಗಿ ಪ್ರಕರಣವನ್ನು ಮಂಜೇಶ್ವರ ಠಾಣೆಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ.

