ಪೈವಳಿಕೆ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ನ 2025–26ನೇ ಸಾಲಿನ ವಾರ್ಷಿಕ ಮಹಾಸಭೆಯು ಬ್ಯಾಂಕ್ ಸಭಾಂಗಣದಲ್ಲಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಭೆಯಲ್ಲಿ ಬ್ಯಾಂಕಿನ 2025–26ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರಗಳು, ಬ್ಯಾಂಕಿನ ವ್ಯವಹಾರ ಹಾಗೂ ಪ್ರಗತಿಯ ವಿವರಗಳನ್ನು ಮಂಡಿಸಲಾಯಿತು. ಠೇವಣಿ, ಸಾಲ ವಿತರಣೆ, ಸದಸ್ಯರ ಸಂಖ್ಯೆ ಸೇರಿದಂತೆ ಬ್ಯಾಂಕಿನ ವಿವಿಧ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ವರದಿ ಪ್ರಕಾರ, 2025–26ನೇ ಸಾಲಿನ ಅಂತ್ಯಕ್ಕೆ ಬ್ಯಾಂಕಿನ ಠೇವಣಿ ₹31,98,19,000 ಆಗಿದ್ದು, ಬ್ಯಾಂಕಿನಿಂದ ವಿತರಿಸಲಾದ ಒಟ್ಟು ಸಾಲದ ಮೊತ್ತ ₹29,87,41,000 ಆಗಿದೆ. ಬ್ಯಾಂಕಿನಲ್ಲಿ ವಿವಿಧ ವರ್ಗಗಳ ಒಟ್ಟು 7,705 ಸದಸ್ಯರು ಇದ್ದಾರೆ.

ಬ್ಯಾಂಕಿನ ವಿವಿಧ ಶಾಖೆಗಳ ಕಾರ್ಯಚಟುವಟಿಕೆಗಳು ಹಾಗೂ ವ್ಯವಹಾರದ ಪ್ರಗತಿಯ ವಿವರಗಳನ್ನು ಸಭೆಯ ಮುಂದಿಡಲಾಯಿತು. ಸದಸ್ಯರಿಗೆ ಉತ್ತಮ ಸೇವೆ ಒದಗಿಸುವುದು, ಬ್ಯಾಂಕಿನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಗಮನ ಹರಿಸಲಾಗಿದೆ.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಪುಷ್ಪ ಜಯರಾಮ ಬಾಯಿಕಟ್ಟೆ, ಮಾಜಿ ಅಧ್ಯಕ್ಷರಾದ ಶ್ರೀಧರ್ ಹೊಳ್ಳ ಹಾಗೂ ಗಣಪತಿ ಭಟ್, ನಿರ್ದೇಶಕರಾದ ವಲ್ಟಿ ಡಿ. ಸೋಜ, ಸಾಲಿ ಪೈವಳಿಕೆ, ಸುಂದರ, ಪ್ರಶಾಂತ ಬಾಯಿಕಟ್ಟೆ, ಶಾಲಿನಿ ರೈ, ಆಶಾದೇವಿ ಹಾಗೂ ಸುದರ್ಶನ್ ಬಲ್ಲಾಳ್ ಕೊಡ್ಯಮೆ ಮಾತನಾಡಿ ಶುಭ ಹಾರೈಸಿದರು.
ಪೈವಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಘವೇಂದ್ರ ಭಟ್, ವಿವಿಧ ಪಕ್ಷಗಳ ರಾಜಕೀಯ ನೇತಾರರಾದ ಲಾರೆನ್ಸ್ ಡಿ. ಸೋಜ, ಪ್ರಸಾದ ರೈ, ಅಜಿತ್ ಎಂ.ಸಿ., ಚಂದ್ರ ನಾಯ್ಕ್, ಸಲೀಲ್ ಮಾಸ್ಟರ್ ಹಾಗೂ ಅಬ್ದುಲ್ ಮಾಸ್ಟರ್ ಉಪಸ್ಥಿತರಿದ್ದು ಶುಭ ಹಾರೈಸಿದರು.


ನಿರ್ದೇಶಕರಾದ ಅಜಿಜ್ ಕಲಾಯಿ ಸ್ವಾಗತಿಸಿದರು. ಬ್ಯಾಂಕಿನ ವಾರ್ಷಿಕ ವರದಿಯನ್ನು ಕೇಶವ ಬಾಯಿಕಟ್ಟೆ ಮಂಡಿಸಿದರು. ಸಭೆಯ ಅಂತ್ಯದಲ್ಲಿ ಧನ್ಯವಾದ ಅರ್ಪಿಸಲಾಯಿತು.
ಮಹಾಸಭೆಯಲ್ಲಿ ಬ್ಯಾಂಕಿನ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

