ಮಂಜೇಶ್ವರ: ಐಎನ್ಟಿಯುಸಿ ಮಂಜೇಶ್ವರ ರೀಜಿನಲ್ ಸಮಿತಿಯ ಆಶ್ರಯದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಯಿತು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಜೆ. ಸೋಮಶೇಖರ ಶೇಣಿ ಸಮಾವೇಶವನ್ನು ಉದ್ಘಾಟಿಸಿದರು. ರೀಜಿನಲ್ ಅಧ್ಯಕ್ಷ ಸತ್ಯನ್ ಸಿ. ಉಪ್ಪಳ ಅಧ್ಯಕ್ಷತೆ ವಹಿಸಿದ್ದರು.


ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಅಗತ್ಯದ ಕುರಿತು ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಕಾರ್ಮಿಕರ ನ್ಯಾಯಸಮ್ಮತ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಕಾಪಾಡಲು ಸಂಘಟನೆಯನ್ನು ತಳಮಟ್ಟದಲ್ಲಿ ಮತ್ತಷ್ಟು ಬಲಪಡಿಸಬೇಕು ಹಾಗೂ ಕಾರ್ಮಿಕರ ಐಕ್ಯತೆ ಅತ್ಯಗತ್ಯ ಎಂದು ಮುಖಂಡರು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಕಾರ್ಯದರ್ಶಿ ಲಕ್ಷ್ಮಣ ಪ್ರಭು, ಶಾಜಿ ಎನ್.ಸಿ., ಜಿನ್ಸ್ ಮ್ಯಾಥ್ಯೂ, ಲೋಕನಾಥ ಶೆಟ್ಟಿ, ಶಾಹುಲ್ ಹಮೀದ್, ಪೃಥ್ವಿರಾಜ್ ಶೆಟ್ಟಿ ಹಾಗೂ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ವಿವಿಧ ಘಟಕಗಳ ಹಲವಾರು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.
