ಟೈರ್ ಸ್ಫೋಟಗೊಂಡು ಮಗುಚಿದ ಹಣ್ಣಿನ ಪಿಕಪ್ ವಾಹನದ

ಕುಂಬಳೆ: ಶಿರಿಯ ಪೆಟ್ರೋಲ್ ಪಂಪ್ ಬಳಿ ಸೋಮವಾರ ಬೆಳಿಗ್ಗೆ ಚಲಿಸುತ್ತಿದ್ದ ಹಣ್ಣಿನ ಪಿಕಪ್ ವಾಹನದ ಟೈರ್ ದಿಢೀರ್ ಸ್ಫೋಟಗೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಮಗುಚಿಬಿದ್ದಿದೆ.

​ಮಂಗಳೂರಿನಿಂದ ಕುಂಬಳೆಗೆ ಹಣ್ಣು ಹಂಪಲು ಸಾಗಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ವಾಹನದಲ್ಲಿದ್ದ ತೊಕ್ಕೋಟು ನಿವಾಸಿಗಳಾದ ಸಮದ್ (30) ಹಾಗೂ ಆತಿಶ್ (25) ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ವ್ಯತ್ಯಯಗೊಂಡಿತ್ತು

SHARE
Loading spinner

Leave a Reply

Your email address will not be published. Required fields are marked *

error: Content is protected !!