ಸಮಯಪ್ರಜ್ಞೆಯಿಂದ ಪ್ರಯಾಣಿಕನ ಪ್ರಾಣ ಉಳಿಸಿದ ವೈದ್ಯ….
ಉತ್ತರ ಭಾರತದ ಪ್ರವಾಸ ಮುಗಿಸಿ ಕುಟುಂಬ ಸಮೇತ ವಿಮಾನದಲ್ಲಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ, ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನಿಗೆ ದಿಢೀರ್ ಹೃದಯಾಘಾತ ಸಂಭವಿಸಿತು.

ಸ್ಥಿತಿ ಗಂಭೀರವಾಗಿದ್ದನ್ನು ಕಂಡು ವಿಮಾನದ ಸಿಬ್ಬಂದಿ ತುರ್ತಾಗಿ ವೈದ್ಯರ ನೆರವಿಗಾಗಿ ವಿನಂತಿಸಿದರು. ಈ ಸಂದರ್ಭದಲ್ಲಿ ಕಿಂಚಿತ್ತೂ ತಡಮಾಡದೆ ರಂಗಕ್ಕಿಳಿದ ಈಶ್ವರಮಂಗಳದ ಡಾ. ಶ್ರೀಕುಮಾರ್ ಕತ್ರಿಬೈಲ್, ತಕ್ಷಣವೇ ಸೂಕ್ತ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಿ ಆ ಪ್ರಯಾಣಿಕನ ಜೀವ ಉಳಿಸುವಲ್ಲಿ ಯಶಸ್ವಿಯಾದರು.
ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಮಾನವೀಯತೆ ಮೆರೆದ ಡಾ. ಶ್ರೀಕುಮಾರ್ ಕತ್ರಿಬೈಲ್ ಅವರ ಸಮಯಪ್ರಜ್ಞೆ ಹಾಗೂ ಸೇವೆಯನ್ನು ಪ್ರಶಂಸಿಸಿ ಸಾರ್ವಜನಿಕರಿಂದ ಹಾಗೂ ನಾಡಿನ ಜನತೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.


