ಮಂಜೇಶ್ವರ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಬೇಡಿಕೆ: ಕೇಂದ್ರ ಸಚಿವರ ಗಮನಕ್ಕೆ ಮನವಿ

ಮಂಜೇಶ್ವರ:ಮಂಜೇಶ್ವರ ರೈಲ್ವೆ ನಿಲ್ದಾಣದ ವಿವಿಧ ಅಭಿವೃದ್ಧಿ ಬೇಡಿಕೆಗಳನ್ನು ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದು, ರೈಲ್ವೆ ಸಹ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಲು ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.

ಮಂಜೇಶ್ವರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಯೋಜನೆಗಳ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆಸಲಾಯಿತು. ಪಾಲಕ್ಕಾಡ್ ವಿಭಾಗದ ಕೊನೆಯ ಹಾಗೂ ಕೇರಳದ ಮೊದಲ ರೈಲ್ವೆ ನಿಲ್ದಾಣವಾಗಿರುವ ಮಂಜೇಶ್ವರವನ್ನು ಟರ್ಮಿನಲ್ ಅಥವಾ ಜಂಕ್ಷನ್ ರೈಲ್ವೆ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವ ಬೇಡಿಕೆಯನ್ನು ಮುಂದಿಡಲಾಗಿದೆ.

ನಿಲ್ದಾಣಕ್ಕೆ ಸೇರಿದ ಸುಮಾರು 38 ಎಕರೆ ರೈಲ್ವೆ ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಂಡು, ನಿಲ್ದಾಣವನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆಯೂ ಚರ್ಚೆ ನಡೆಯಿತು.

ಇದೇ ವೇಳೆ, ಮಂಜೇಶ್ವರ ರೈಲ್ವೆ ನಿಲ್ದಾಣಕ್ಕೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆಯನ್ನೂ ಮುಂದಿಡಲಾಗಿದೆ.

ಮಂಜೇಶ್ವರ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ, ಹರಿಶ್ಚಂದ್ರ ಎಂ, ಪ್ರಕಾಶ್ ಕೀರ್ತಿಶ್ವರ,ಮಂಜೇಶ್ವರ ಶ್ರೀ ಮದನಂತೆಶ್ವರ ದೇವಾಲಯ ಟ್ರಷ್ಟಿ ಗಳಾದ ಶ್ರೀ ಗಣಪತಿ ಪೈ, ನಿತೀನ್ ಪೈ, ಪ್ರಶಾಂತ್ ಪೈ, ರಾಹುಲ್, ಮಂಜೇಶ್ವರ ರೈಲ್ವೆ ಹೊರಟ ಸಮಿತಿ ಮುಖಂಡರಾದ ಎಸಿಪಿ rt. ಬಷೀರ್ ಅಹಮ್ಮದ್, ಹರೀಶ್ ಟೈಲರ್, ಮಜೀದ್ ಎಂ, ಜಗದೀಶ್ ದೇವಾಡಿಗ, vk ಆಚಾರ್ಯ ಮೊದಲದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!