ಮಂಗಳೂರು: ಎಂಆರ್ಪಿಎಲ್ನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಕಟ್ಟಡಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಎಂಆರ್ಪಿಎಲ್ ಪ್ರದೇಶದ ಸಮೀಪದಲ್ಲಿರುವ ಕಳವಾರು ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಫೋಟದ ತೀವ್ರತೆಗೆ ಮಸೀದಿ ಕಟ್ಟಡದ ವಿವಿಧ ಭಾಗಗಳಿಗೆ ಹಾನಿಯಾಗಿರುವ ಕುರಿತು ಮಾಹಿತಿ ಪಡೆದ ಅವರು, ಸ್ಥಳದಲ್ಲೇ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿದರು. ಮಸೀದಿ ಆಡಳಿತ ಮಂಡಳಿ ಹಾಗೂ ಸ್ಥಳೀಯರಿಂದ ಸ್ಫೋಟದ ಸಂದರ್ಭ ಉಂಟಾದ ಪರಿಸ್ಥಿತಿ ಮತ್ತು ಕಟ್ಟಡಕ್ಕೆ ಸಂಭವಿಸಿರುವ ಹಾನಿಯ ವಿವರಗಳನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಸ್ಫೋಟದಿಂದ ಮಸೀದಿ ಕಟ್ಟಡಕ್ಕೆ ಉಂಟಾಗಿರುವ ಹಾನಿ ಹಾಗೂ ಸ್ಥಳೀಯರಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಐವನ್ ಡಿ’ಸೋಜಾ ಅವರು ಚರ್ಚಿಸಿದರು. ಹಾನಿಯ ಪ್ರಮಾಣವನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿರುವ ಪರಿಹಾರ ಹಾಗೂ ಇತರ ಕ್ರಮಗಳ ಕುರಿತು ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಫೋಟದ ಪರಿಣಾಮದಿಂದ ಸಾರ್ವಜನಿಕ ಹಾಗೂ ಧಾರ್ಮಿಕ ಕಟ್ಟಡಗಳಿಗೆ ಉಂಟಾಗಿರುವ ಹಾನಿಯ ಬಗ್ಗೆ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಬೇಕು. ಹಾನಿಗೊಳಗಾದ ಕಟ್ಟಡಗಳ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದರು.

ಸ್ಥಳೀಯರ ಅಹವಾಲುಗಳನ್ನು ಆಲಿಸಿದ ಐವನ್ ಡಿ’ಸೋಜಾ, ಸ್ಫೋಟದಿಂದ ಉಂಟಾಗಿರುವ ಹಾನಿಯ ಕುರಿತು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು, ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದಾಗಿ ತಿಳಿಸಿದರು.



Super impressed with the interface here. It is very user-friendly and the registration process was a breeze. Highly recommend giving idwakanda123 a shot if you want a hassle-free experience.