ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರವರು ಮತದಾರ ಪಟ್ಟಿ ತೀವ್ರ ಪರಿಷ್ಕರಣೆಯ ಹೆಸರಲ್ಲಿ ನಡೆಸುವ ಅಕ್ರಮಣಕ್ಕೆದುರಾಗಿ ಅವರ ರಾಜಿನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ಸಮರದಲ್ಲಿ ಭಾಗವಹಿಸಿದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಸಹಿತ ನೇತಾರರನ್ನು ಹಾಗೂ ಸಂಸತ್ತ್ ಸದಸ್ಯರ ಮೇಲೆ ಪೋಲಿಸ್ ನಡೆಸಿದ ಲಾಠಿ ಪ್ರಹಾರ. ಮತ್ತು ಅರೆಸ್ಟನ್ನು ಪ್ರತಿಭಟಿಸಿಕೊಂಡು ಪಕ್ಷದ ಏರಿಯಾ ಸಮಿತಿಯ ನೇತೃತ್ವದಲ್ಲಿ ಪೆರ್ಮುದೆಯಲ್ಲಿ ಮೆರವಣಿಗೆ ಹಾಗೂ ಪ್ರತಿಭಟನಾ ಸಭೆ ನಡೆಯಿತು.


ಸಭೆಯನ್ನು ಏರಿಯಾ ಕಾರ್ಯದರ್ಶಿ ಸಿ ಜಿ ಮ್ಯಾಥ್ಯು ಉದ್ಘಾಟಿಸಿದರು. ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕೆ ಆರ್ ಜಯಾನಂದ ಮಾತನಾಡಿದರು.ಬಶೀರ್ ಬಿ ಎ ಅಧ್ಯಕ್ಷತೆವಹಿಸಿದರು. ಅಶೋಕ ಭಂಡಾರಿ ಸ್ವಾಗತಿಸಿದರು. ಹಾರಿಸ್ ಪೈವಳಿಕೆ, ಚಂದ್ರ ನಾಯ್ಕ್, ರಾಮಚಂದ್ರ ಟಿ ನೇತೃತ್ವ ನೀಡಿದರು.

