ಸೀತಾಂಗೊಳಿ : ಶ್ರೀ ರಾಮ ಬಾಲಗೋಕುಲ ಛತ್ರಪತಿ ನಗರ ದರ್ಬೆತ್ತಡ್ಕ ಇದರ ವತಿಯಿಂದ ಶ್ರೀ ರಾಮ ಕುಣಿತ ಭಜನಾ ತಂಡವನ್ನು ಉದ್ಘಾಟಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಶ್ರೀ ರಾಮ ಬಾಲ ಗೋಕುಲದ ಅಧ್ಯಕ್ಷರಾದ ಶಶಿಕುಮಾರ್ ವಹಿಸಿದರು. ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ. ಡಿ ಉದ್ಘಾಟಿಸಿದರು .ಮುಖ್ಯ ಅತಿಥಿಯಾಗಿ ಶ್ರೀ ಸತೀಶ್ ಕುಮಾರ್ ಕಾಪು ಪ್ರಧಾನ ಸಂಚಾಲಕರು, ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಭಾಗವಹಿಸಿದರು. ಭಜನಾ ಶಿಕ್ಷಕಿ ಶ್ರೀಮತಿ ಸಂಧ್ಯಾ ಮಾತಾಜಿ ಭಜನೆಯ ಮಹತ್ವವನ್ನು ತಿಳಿಸಿದರು.


ಮಾತೃಮಂಡಳಿಯ ಅಧ್ಯಕ್ಷೆ ಶ್ರೀಮತಿ ನಿರ್ಮಲ ಬಿ ಕೆ ಉಪಸ್ಥಿತಿ ಇದ್ದರು ಸಭೆಯಲ್ಲಿ ಭಜನಾ ಶಿಕ್ಷಕಿ ಶ್ರೀಮತಿ ಸಂಧ್ಯಾ ಮಾತಾಜಿ ಇವರಿಗೆ ಮಕ್ಕಳಿಂದ ಗುರುವಂದನೆ ಸಮರ್ಪಿಸಲಾಯಿತು. ತದನಂತರ ಮಾತಾಜಿಗೆ ಗೌರವಾರ್ಪಣೆ ಮಾಡಲಾಯಿತು. ಶ್ರೀ ರಾಮ ಬಾಲಗೋಕುಲದ ಮಕ್ಕಳು ಪ್ರಾರ್ಥಿಸಿದ ಕಾರ್ಯಕ್ರಮವನ್ನು ಮಾತೃ ಮಂಡಳಿ ಕೋಶಾಧಿಕಾರಿ ಶ್ರೀಮತಿ ರಮ್ಯಾ ಯನ್ ದರ್ಬೆತ್ತಡ್ಕ ಸ್ವಾಗತಿಸಿದರು.

ಬಾಲಗೋಕುಲ ಸಮಿತಿ ಸದಸ್ಯ ಶ್ರೀ ಮೋಹನದಾಸ್ ರೈ ನಿರೂಪಿಸಿದ ಕಾರ್ಯಕ್ರಮವನ್ನು ಬಾಲಗೋಕುಲ ಸಮಿತಿ ಜೊತೆ ಕಾರ್ಯದರ್ಶಿ ಶ್ರೀ ಕೀರ್ತನ್ ಕುಮಾರ್ ಧನ್ಯವಾದ ವಿತ್ತರು. ನಂತರ ಮಕ್ಕಳಿಗೆ ಶ್ರೀಮತಿ ಸಂಧ್ಯಾ ಮಾತಾಜಿ ಭಜನಾ ಪ್ರಾತ್ಯಕ್ಷಿಕೆ ಹೇಳಿ ಕೊಟ್ಟರು .ಸುಮಾರು 100 ಕ್ಕಿಂತಲು ಹೆಚ್ಚು ಮಕ್ಕಳು ಪೋಷಕರು, ಮಹನೀಯರು ಉಪಸ್ಥಿತರಿದ್ದರು



