​ಮಂಜೇಶ್ವರ: ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಗಮನ ಸೆಳೆದ ಪ್ರೇರಣಾದಾಯಿ ಓರಿಯಂಟೇಷನ್ ಹಾಗೂ ತರಬೇತಿ ಶಿಬಿರ ಸಂಪನ್ನ

​ಮಂಜೇಶ್ವರ: ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ನೂತನ ಶೈಲಿಯ ಓರಿಯಂಟೇಷನ್ ಮತ್ತು ತರಬೇತಿ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಪ್ರಸಿದ್ಧ ಕೌನ್ಸೆಲಿಂಗ್ ಸೈಕಾಲಜಿಸ್ಟ್ ಮತ್ತು ಎಜುಕೇಷನಲ್ ಟ್ರೇನರ್ ಪ್ರೊ. ಕೆ.ಪಿ. ಸಹದ್ ಅವರು ಈ ಶಿಬಿರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನಡೆಸಿಕೊಟ್ಟರು.

​ತರಬೇತಿ ಶಿಬಿರದ ಕುರಿತು ಮಾತನಾಡಿದ ಪ್ರೊ. ಕೆ.ಪಿ. ಸಹದ್ ಅವರು, (Byt 1) : “ನಮ್ಮ ಜೀವನದಲ್ಲಿ ನಮಗೆ ದೊರೆತಿರುವ ಅನುಭವಗಳು ಮತ್ತು ಜ್ಞಾನವನ್ನು ಅತ್ಯಂತ ಆತ್ಮೀಯ ಹಾಗೂ ಹೃದ್ಯವಾದ ರೀತಿಯಲ್ಲಿ ಇತರರಿಗೆ ಹಂಚಲು ಸಾಧ್ಯವಾಗುವುದು ಅತ್ಯಂತ ದೊಡ್ಡ ಭಾಗ್ಯವಾಗಿದೆ. ಸರ್ವಶಕ್ತನಾದ ಅಲ್ಲಾಹನು ನಮಗೆ ನೀಡಿದ ಆಯುಷ್ಯ ಮತ್ತು ಆರೋಗ್ಯವನ್ನು ಅಲಸ್ಯ ಹಾಗೂ ನಿಷ್ಕ್ರಿಯತೆಯಲ್ಲಿ ಕಳೆಯದೆ, ಇತರರ ಜೀವನದಲ್ಲಿ ಒಳಿತನ್ನು ತರಲು ಬಳಸಿಕೊಳ್ಳಬೇಕು. ಜೀವನದಲ್ಲಿ ಕಳೆದುಹೋದ ಸಮಯ ಎಂದಿಗೂ ಹಿಂತಿರುಗಿ ಬರುವುದಿಲ್ಲ; ಆದ್ದರಿಂದ ಲಭಿಸಿದ ಸುವರ್ಣಾವಕಾಶಗಳನ್ನು ಸಮಾಜದ ನನ್ಮೆಗಾಗಿ ಸದುಪಯೋಗಪಡಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.

​ಕಾರ್ಯಕ್ರಮದ ಕುರಿತು ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಅಬ್ದುಲ್ ಖಾದರ್ ಅವರು, ( Byt 2): ಇಂದಿನ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಮತ್ತು ಆಧುನಿಕ ಸವಾಲುಗಳನ್ನು ಎದುರಿಸಲು ಇಂತಹ ವೈಜ್ಞಾನಿಕ ತರಬೇತಿ ಶಿಬಿರಗಳು ಅತ್ಯಂತ ಅಗತ್ಯವಾಗಿದೆ” ಎಂದು ತಮ್ಮ ಕಿರು ನುಡಿಗಳಲ್ಲಿ ತಿಳಿಸಿದರು.

​ಮೊದಲ ದಿನ ಶಾಲೆಯ 50ಕ್ಕೂ ಹೆಚ್ಚು ಶಿಕ್ಷಕರಿಗಾಗಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬೋಧನೆಯ ಆಧುನಿಕ ಶೈಲಿಗಳು ಮತ್ತು ಮಗುವಿನ ಮಾನಸಿಕ ಮಗ್ಗಲುಗಳ ಕುರಿತು ಪ್ರೊ. ಕೆ.ಪಿ. ಸಹಾದ್ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.

33 ವರ್ಷಗಳ ಕಾಲೇಜು ಬೋಧನಾ ಅನುಭವ ಹೊಂದಿರುವ ಅವರು ಶಿಕ್ಷಕರಿಗೆ ಮಾಸ್ಟರ್ ಟ್ರೇನರ್ ಆಗಿ ಮಾರ್ಗದರ್ಶನ ನೀಡಿದರು.

​ಬಳಿಕ 7ರಿಂದ 10ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ನಾಲ್ಕು ಗಂಟೆಗಳ ಕಾಲ ಸೈಕಾಲಜಿಕಲ್ ಕೌನ್ಸೆಲಿಂಗ್ ಕಾರ್ಯಾಗಾರ ನಡೆಯಿತು.
‘ಜೆನ್ ಜಿ’ ತಲೆಮಾರಿನ ಮಕ್ಕಳು ಎದುರಿಸುತ್ತಿರುವ ಹದಿಹರೆಯದ ಭಾವನಾತ್ಮಕ ಮತ್ತು ಮಾನಸಿಕ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಈ ಸೆಷನ್ ನೆರವಾಯಿತು.

​ಕಾರ್ಯಕ್ರಮದ ಕೊನೆಯ ಹಂತವಾಗಿ ವಿದ್ಯಾರ್ಥಿಗಳ ಪೋಷಕರಿಗಾಗಿ ‘ಪೇರೆಂಟಿಂಗ್ ಕ್ಲಾಸ್’ ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ಮಕ್ಕಳನ್ನು ಬೆಳೆಸುವುದು ಹೇಗೆ? ಇಂದಿನ ಪೋಷಕರು ಎದುರಿಸುತ್ತಿರುವ ಆಧುನಿಕ ಸವಾಲುಗಳು ಎಂಬ ವಿಷಯಗಳ ಬಗ್ಗೆ ಪೋಷಕರೊಂದಿಗೆ ನೇರ ಸಂವಾದ ನಡೆಸಿ, ಅವರ ಸಂಶಯಗಳನ್ನು ನಿವಾರಿಸಲಾಯಿತು.

​ಸದರಿ ಕಾರ್ಯಕ್ರಮದಲ್ಲಿ ಶಾಲಾ ಚೇರ್ಮನ್ ಅಬ್ದುಲ್ ರಹಮಾನ್ ಅರಿಮಲ, ಶಾಲಾ ಮ್ಯಾನೇಜರ್ ಎ ಆರ್ ಉದ್ಯಾವರ, ವಿವಿಧ ವಿಭಾಗಗಳ ಕೋಆರ್ಡಿನೇಟರ್‌ಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!