ಕನ್ನಡೇತರ ಬಿಆರ್‌ಸಿ ಬ್ಲಾಕ್ ಕೋಆರ್ಡಿನೇಟರ್ ನೇಮಕಾತಿ ವಿರುದ್ಧ ಕನ್ನಡ ಅಧ್ಯಾಪಕರ ಸಂಘದಿಂದ ಪ್ರತಿಭಟನೆ

ಮಂಜೇಶ್ವರ: ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಮಂಜೇಶ್ವರ ಬಿಆರ್‌ಸಿಯ ಬ್ಲಾಕ್ ಕೋಆರ್ಡಿನೇಟರ್ ಹುದ್ದೆಗೆ ಕನ್ನಡದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೂ, ಅವರನ್ನು ಕಡೆಗಣಿಸಿ ಕನ್ನಡೇತರ ಅಭ್ಯರ್ಥಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಆರೋಪಿಸಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು.

ಮಂಜೇಶ್ವರದ ಬಿಆರ್‌ಸಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ಸುಕೇಶ್ ಎ. ಉದ್ಘಾಟಿಸಿದರು. ಸಂಘದ ಮಂಜೇಶ್ವರ ಉಪಜಿಲ್ಲಾ ಸಮಿತಿಯ ಅಧ್ಯಕ್ಷ ಅಶೋಕ್ ಕೊಡ್ಲಮೊಗರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕನ್ನಡದ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ ಕನ್ನಡೇತರ ಅಭ್ಯರ್ಥಿಗೆ ನೇಮಕಾತಿ ನೀಡಿರುವುದು ಕನ್ನಡಿಗರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು. ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡ ಮಾಧ್ಯಮದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅರ್ಹ ಕನ್ನಡ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ನೇಮಕಾತಿ ಆದೇಶವನ್ನು ವಿರೋಧಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಸಭೆಯಲ್ಲಿ ಅರವಿಂದಾಕ್ಷ ಭಂಡಾರಿ, ಇಸ್ಮಾಯಿಲ್ ಮಾಸ್ಟರ್, ಚಂದ್ರಿಕಾ ಟೀಚರ್, ಅಶ್ರಫ್ ಮರ್ಥ್ಯ ಹಾಗೂ ಉಮೇಶ್ ಬೆರಿಪದವು ಮಾತನಾಡಿದರು. ಭಾಗ್ಯಶ್ರೀ ಟೀಚರ್, ಜಯರಾಮ ಮಾಸ್ಟರ್ ಹಾಗೂ ಅಮಿತಾ ಟೀಚರ್ ಉಪಸ್ಥಿತರಿದ್ದರು.

ಜಯಪ್ರಶಾಂತ್ ಪಾಲೆಂಗ್ರಿ ಪ್ರತಿಭಟನಾ ಘೋಷಣೆಗಳನ್ನು ಕೂಗಿದರು. ಸಂಘದ ಕಾರ್ಯದರ್ಶಿ ಸುನೀಲ್ ಕುಮಾರ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಶಿವರಾಮ್ ಭಟ್ ವಂದಿಸಿದರು.

SHARE
Loading spinner

One thought on “ಕನ್ನಡೇತರ ಬಿಆರ್‌ಸಿ ಬ್ಲಾಕ್ ಕೋಆರ್ಡಿನೇಟರ್ ನೇಮಕಾತಿ ವಿರುದ್ಧ ಕನ್ನಡ ಅಧ್ಯಾಪಕರ ಸಂಘದಿಂದ ಪ್ರತಿಭಟನೆ”

Leave a Reply

Your email address will not be published. Required fields are marked *

error: Content is protected !!