ಮಂಜೇಶ್ವರ — ನೂತನವಾಗಿ ಕಾಮಗಾರಿ ಪೂರ್ಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಷಟ್ಪಪಥ (ಸಿಕ್ಸ್ ಲೈನ್) ರಸ್ತೆಯ ತಲಪಾಡಿಯಿಂದ ತೂಮಿನಾಡು ತನಕದ ಸರ್ವೀಸ್ ರಸ್ತೆಯ ಪರಿಸ್ಥಿತಿ ದಾರುಣವಾಗಿದೆ. ರಸ್ತೆಯ ಬದಿಗಳಲ್ಲಿ ತ್ಯಾಜ್ಯಗಳು ತುಂಬಿದ್ದು, ದುರ್ಗಂಧದಿಂದಾಗಿ ಜನರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿಗೆ ತಲುಪಿದೆ.
ಪ್ರತಿದಿನ ಈ ದಾರಿಯಾಗಿ ಶಾಲಾ ವಿದ್ಯಾರ್ಥಿಗಳು, ನೂರಾರು ವಾಹನಗಳು ಹಾಗೂ ಕಾಲ್ನಡೆ ಯಾತ್ರಿಕರು ಸಂಚಾರ ಮಾಡುತ್ತಿದ್ದು, ರಸ್ತೆಯ ಬದಿಯಲ್ಲಿ ಶೇಖರಣೆಯಾಗಿರುವ ಅಪಾಯಕಾರಿ ತ್ಯಾಜ್ಯ ಗುದ್ದಲಿಯಿಂದ ತೀವ್ರ ಅಸ್ವಚ್ಛತೆ ಉಂಟಾಗಿದೆ. ಪ್ಲಾಸ್ಟಿಕ್ ಮುಡಕಿಗಳು, ಆಹಾರದ ಅವಶಿಷ್ಟಗಳು, ಹಾಳಾದ ವಸ್ತುಗಳು ಹಾಗೂ ನೈರ್ಮಲ್ಯಸಂಬಂಧಿ ತ್ಯಾಜ್ಯಗಳು ಸೇರಿಕೊಂಡು ಪರಿಸರಕ್ಕೆ ವಿಷವಾಯುವಿನಂತಾಗಿವೆ.
ಇದರಿಂದ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹತ್ತಿರದ ನಿವಾಸಿಗಳು ಮತ್ತು ವ್ಯಾಪಾರಸ್ಥರು ಈ ಪರಿಸ್ಥಿತಿಯಿಂದ ಬೇಸತ್ತು, ಮೌನ ಪ್ರತಿಭಟನೆಯತ್ತ ಮುಖಹಾಕಿದ್ದಾರೆ.
ಪಂಚಾಯತ್ ಹಾಗೂ ಸ್ಥಳೀಯ ಆಡಳಿತ ಅಧಿಕಾರಸ್ಥರ ನಿರ್ಲಕ್ಷ್ಯ ನಾಗರಿಕರಲ್ಲಿ ಆಕ್ರೋಶದ ಕಿಡಿಗೇಡಿಯನ್ನು ಹುಟ್ಟಿಸಿದೆ. “ಮನೆ ಮುಂದೆ ತ್ಯಾಜ್ಯವನ್ನು ಒಮ್ಮೆ ಎಸೆದರೂ ದಂಡ ವಿಧಿಸುವ ಅಧಿಕಾರಿಗಳು ಸಾರ್ವಜನಿಕ ರಸ್ತೆಯ ತ್ಯಾಜ್ಯ ಪತ್ತೆಯಾದರೂ ಕಣ್ಣು ಮುಚ್ಚಿ ಜಾಣ ಕುರುಡರಾಗಿರುವುದು ಬೇಸರದ ವಿಷಯ” ಎಂದು ಸ್ಥಳೀಯರಾದ ಯು ಕೆ ಸೈಪುಲ್ಲಾ ತಂಘಲ್, ಆಟೋ ಚಾಲಕರಾದ ದೇವದಾಸ್ ಹಾಗೂ ರವಿ ಶೆಟ್ಟಿಯವರು ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಹೆದ್ದಾರಿ ಕಾಮಗಾರಿ ತುಂಬಾ ವೆಚ್ಚದಲ್ಲಿ ಹಾಗೂ ಉನ್ನತ ಗುಣಮಟ್ಟದಲ್ಲಿ ನಿರ್ವಹಿಸಲ್ಪಟ್ಟಿದ್ದರೂ, ಸರ್ವೀಸ್ ರಸ್ತೆಯ ನಿರ್ವಹಣೆಗೆ ಉಂಟಾಗಿರುವ ಅಕ್ಷಮತೆ, ಈ ಪ್ರಾಜೆಕ್ಟಿನ ಗೌರವಕ್ಕೆ ಛಿದ್ರ ತಂದಿದೆ.
ತಕ್ಷಣ ಈ ಪ್ರದೇಶವನ್ನು ಸ್ವಚ್ಛಗೊಳಿಸಲು ಸ್ಥಳೀಯಾಡಳಿತದ ಅಧಿಕಾರಸ್ಥರು ಕ್ರಮ ತೆಗೆದುಕೊಳ್ಳಬೇಕು. ತ್ಯಾಜ್ಯ ಬಿಸಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು. ನಿಯಮಿತವಾಗಿ ಕಸ ವಿಲೇವಾರಿ ವ್ಯವಸ್ಥೆ ಜಾರಿಗೆ ಬರಬೇಕು. ಇಲ್ಲದಿದ್ದರೆ ಸಾರ್ವಜನಿಕ ಹೋರಾಟ ಅನಿವಾರ್ಯವಾಗಲಿದೆ ಎಂಬ ಎಚ್ಚರಿಕೆಯನ್ನು ನಾಗರಿಕರು ನೀಡುತ್ತಿದ್ದಾರೆ