ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 6ರಂದು ನಡೆದ ‘ವಂದೇ ಮಾತರಂ’ 150ನೇ ವಾರ್ಷಿಕೋತ್ಸವದ ರಾಷ್ಟ್ರೀಯ ವಿಚಾರಗೋಷ್ಠಿ ವೇಳೆ ಪ್ರತಿಭಟನೆ ನಡೆಸಿ ಅಡ್ಡಿಪಡಿಸಿದ ಆರೋಪದ ಮೇಲೆ ಅಮಾನತಾಗಿದ್ದ ಐವರು ವಿದ್ಯಾರ್ಥಿಗಳ ಅಮಾನತು ಆದೇಶವನ್ನು ವಿವಿ ಆಡಳಿತ ಮಂಡಳಿ ಹಿಂತೆಗೆದುಕೊಂಡಿದೆ.

ಎಸ್.ಎಫ್.ಐ, ಎನ್.ಎಸ್.ಯು ಹಾಗೂ ಎಂ.ಎಸ್.ಎಫ್ ನಾಯಕರಾದ ಎಸ್. ಸಯ್ಯದ್ ಅಲಿ, ವಿ.ಬಿ. ಆವೇದ್, ಯಾಸಿನ್ ಮತ್ತು ಶಬೀರ್ ತಖಿಯುದ್ದೀನ್ ಸೇರಿದಂತೆ ಐವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ತನಿಖಾ ಸಮಿತಿಯ ಪ್ರಾಥಮಿಕ ವರದಿ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಮೇಲಿನ ಅಮಾನತು ತೆರವುಗೊಳಿಸಿದರೂ ಆಂತರಿಕ ತನಿಖೆ ಮುಂದುವರಿಯಲಿದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

