ವಂದೇ ಮಾತರಂ ವಿಚಾರಗೋಷ್ಠಿ ಗದ್ದಲ ಪ್ರಕರಣ: ಅಮಾನತಾಗಿದ್ದ ಐವರು ವಿದ್ಯಾರ್ಥಿಗಳ ಆದೇಶ ಹಿಂಪಡೆದ ವಿವಿ

ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 6ರಂದು ನಡೆದ ‘ವಂದೇ ಮಾತರಂ’ 150ನೇ ವಾರ್ಷಿಕೋತ್ಸವದ ರಾಷ್ಟ್ರೀಯ ವಿಚಾರಗೋಷ್ಠಿ ವೇಳೆ ಪ್ರತಿಭಟನೆ ನಡೆಸಿ ಅಡ್ಡಿಪಡಿಸಿದ ಆರೋಪದ ಮೇಲೆ ಅಮಾನತಾಗಿದ್ದ ಐವರು ವಿದ್ಯಾರ್ಥಿಗಳ ಅಮಾನತು ಆದೇಶವನ್ನು ವಿವಿ ಆಡಳಿತ ಮಂಡಳಿ ಹಿಂತೆಗೆದುಕೊಂಡಿದೆ.

​ಎಸ್.ಎಫ್.ಐ, ಎನ್.ಎಸ್.ಯು ಹಾಗೂ ಎಂ.ಎಸ್.ಎಫ್ ನಾಯಕರಾದ ಎಸ್. ಸಯ್ಯದ್ ಅಲಿ, ವಿ.ಬಿ. ಆವೇದ್, ಯಾಸಿನ್ ಮತ್ತು ಶಬೀರ್ ತಖಿಯುದ್ದೀನ್ ಸೇರಿದಂತೆ ಐವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ತನಿಖಾ ಸಮಿತಿಯ ಪ್ರಾಥಮಿಕ ವರದಿ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಮೇಲಿನ ಅಮಾನತು ತೆರವುಗೊಳಿಸಿದರೂ ಆಂತರಿಕ ತನಿಖೆ ಮುಂದುವರಿಯಲಿದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!