ಕಾಸರಗೋಡು : ಕುತ್ತಿಕ್ಕೋಲ್ ವಟ್ಟಂತಟ್ಟ ಇಳಿಜಾರಿನಲ್ಲಿ ಗೂಗಲ್ ಮ್ಯಾಪ್ ನೋಡಿ ಲಾರಿ ಚಲಾಯಿಸುತ್ತಿದ್ದ ತಮಿಳುನಾಡು ಮೂಲದ ಚಾಲಕನ ನಿರ್ಲಕ್ಷ್ಯದಿಂದ ಭಾರಿ ಅಪಘಾತ ಸಂಭವಿಸಿದೆ.

ಗುರುವಾರ ರಾತ್ರಿ ಇಳಿಜಾರಿನಲ್ಲಿ ಲಾರಿಯ ಬ್ರೇಕ್ ವೈಫಲ್ಯಗೊಂಡು, ಮುಂಭಾಗದಲ್ಲಿ ಸಾಗುತ್ತಿದ್ದ ಬುಲ್ಲೆಟ್ಗೆ ಪ್ರಬಲವಾಗಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಬುಲ್ಲೆಟ್ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ ದೊಡ್ಡ ದುರಂತವೊಂದು ಕೂದಲೆಳೆಯುವಷ್ಟರಲ್ಲಿ ತಪ್ಪಿದೆ.

ಅಪಘಾತದ ಬಳಿಕ ಲಾರಿ ಪ್ರಪಾತಕ್ಕೆ ಮಗುಚಿಬಿದ್ದಿದ್ದು, ಒಳಗೆ ಸಿಲುಕಿದ್ದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಾಳು ಚಾಲಕನನ್ನು ರಕ್ಷಿಸಿದ್ದಾರೆ.

