ಪಾಲಕ್ಕಾಡು ವಿಭಾಗೀಯ ರೈಲ್ವೆ ಅಧಿಕಾರಿ ಡಿವಿಸನಲ್ ರೈಲ್ವೆ ಮೆನೇಜರ್ ಮಧುಕರ್ ರವತ್ ಹಾಗೂ ADRM ಜಯಕೃಷ್ಣನ್ ಇಂದು ಬಿಜೆಪಿ ಜಿಲ್ಲಾ ಅಗ್ರಹದಂತೆ ಕೇಂದ್ರ ರೈಲ್ವೆ ಸಚಿವರ ಆದೇಶದಂತೆ ಇಂದು ಮಂಜೇಶ್ವರ ರೈಲ್ವೆ ನಿಲ್ದಾಣ ಪರಿಶೀಲನೆ ಹಾಗೂ ಅಭಿವೃದ್ಧಿ ಬಗ್ಗೆ ಅವಲೋಕನ ನಡೆಸಲು ಬಂದ ಸಂದರ್ಭ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಹರಿಶ್ಚಂದ್ರ ಮಂಜೇಶ್ವರ ನೇತೃತ್ವದಲ್ಲಿ ಮಂಜೇಶ್ವರ ದ ರೈಲ್ವೆ ಅಭಿವೃದ್ಧಿ ಬಗ್ಗೆ ಸಮಾಲೋಚನೆ ಮಾಡಲಾಯಿತು ಹಾಗೂ ಬಿಜೆಪಿ ವತಿಯಿಂದ ವಿವಿಧ ಬೇಡಿಕೆ ಗಳಿಗೆ ಮನವಿ ನೀಡಲಾಯಿತು.
ಅಗತ್ಯ ವಾಗಿ ಆಗಬೇಕಾದ ಹೊಸಂಗಡಿ ರೈಲ್ವೆ ಬ್ರಿಡ್ಜ್, ಹೊಸಬೆಟ್ಟು ಕ್ರಾಸ್ಸಿಂಗ್,ರಾಷ್ಟೀಯ ಹೆದ್ದಾರಿ ಮುಂಭಾಗ ರೈಲ್ವೆ ವತಿಯಿಂದ ಶಾಪಿಂಗ್ ಕಟ್ಟಡ, ಪಾರ್ಕ್, ಹಾಗೂ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಸ್ವಯಂ ಚಾಲಿತ ಲಿಫ್ಟ್ ಸ್ಥಾಪಿಸಲು ಹಾಗೂ ವಿವಿಧ ರೈಲುಗಳು ಮಂಜೇಶ್ವರ ನಿಲುಗಡೆಗೆ ಬೇಡಿಕೆ ನೀಡಲಾಯಿತು. ಮತ್ತು ರೈಲ್ವೆ ಆದರ್ಶ ಅಭಿವೃದ್ಧಿ ಯೋಜನೆ ಯಲ್ಲಿ ಮಂಜೇಶ್ವರ ರೈಲು ನಿಲ್ದಾಣವನ್ನು ಸೇರಿಸಲು ಮನವಿ ನೀಡಲಾಯಿತು.