ಕೇಂದ್ರ ಸರಕಾರ ಅದ್ಬುತ ವಾಗಿ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕಾಂಟ್ರಾಕ್ಟ್ ಸಂಸ್ಥೆ ಉರಂಗಲ್ ಸೊಸೈಟಿ ಜಿಲ್ಲೆಯ ಕೆಲವು ಕಡೆ ಇತಿಹಾಸ ಕಾಲದಿಂದ ಜಾರಿಯಲ್ಲಿರುವ ಕೆಲವು ಹೆಸರು ಗಳನ್ನು ಬದಲಾಯಿಸುತ್ತಿದೆ ಮತ್ತು ಕೇಂದ್ರ ಸರಕಾರ ಕಾಸರಗೋಡು ಜಿಲ್ಲೆ ಯಲ್ಲಿ ಕನ್ನಡ ನಾಮಫಲಕ ಸ್ಥಾಪಿಸಲು ಸೂಚನೆ ನೀಡಿದರು. ಉರಂಗಲ್ ಸಂಸ್ಥೆ ಕನ್ನಡ ಬೋರ್ಡ್ ಸ್ಥಾಪಿಸದೆ ಗಡಿನಾಡಿನ ಕನ್ನಡಿಕರನ್ನು ಅವಮಾನಿಸುತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಆರೋಪಿಸಿದ್ದಾರೆ.
ಮಂಜೇಶ್ವರ ದ ಕನಿಲ ಎಂಬ ಐತಿಹಾಸಿಕ ಹಾಗೂ ಸಾವಿರ ವರ್ಷಕ್ಕೂ ಮೇಲ್ಪಟ್ಟ ಇತಿಹಾಸ ಇರುವ ಕನಿಲ ದಲ್ಲಿ ಉರಂಗಲ್ ಸ್ಥಾಪಿಸಿರುವ ಬಸ್ ವೈಟಿಂಗ್ ಶೆಡ್ ಗೆ ಪೋಸೂಟ್ ಎಂಬ ಬೋರ್ಡ್ ಅಳವಡಿಸಿವುದು ಬೇಜವಾಬ್ದಾರಿ ತನ ಎಂದು ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದೆ.
ವಿಲೇಜ್ ದಾಖಲೆಗಳಲ್ಲಿ ಗ್ರಾಮ ದ ಹೆಸರು ಕನಿಲ ಎಂದು ಇದೆ,
ಚುನಾವಣಾ ಆಯೋಗದ ಪ್ರಕಾರ ವಾರ್ಡ್ ಹೆಸರು ಕನಿಲ ಎಂದು ಇದೆ.
ಸ್ಥಳ ನಾಮ ಬದಲಾವಣೆ ಮಾಡಿರುವುದು ಯಾವ ಉದ್ದೇಶ ದಿಂದ ಎಂದು ಬಿಜೆಪಿ ಉರಂಗಲ್ ವಿರುದ್ದ ದೂರು ನೀಡಿದೆ.ಎಲ್ಲಾ ಸೂಚನಾ ಫಲಕ ಗಳಲ್ಲಿ ಕನ್ನಡ ಬಳಸಬೇಕು ಮತ್ತು ಸ್ಥಳಗಳಿಗೆ ಯಾತರ್ಥ ಹೆಸರನ್ನೇ ಇಡಬೇಕು ಇಲ್ಲವಾದಲ್ಲಿ ಹೋರಾಟಕ್ಕೆ ಬಿಜೆಪಿ ನಿರ್ಧರಿಸಿದೆ