ಮಂಜೇಶ್ವರ: ಗ್ರಾಮ ಪಂಚಾಯತ್ ನ ನೂತನ ಕಾಂಪ್ಲೆಕ್ಸ್‌ ಗೆ ಶಂಕುಸ್ಥಾಪನೆ

ಮಂಜೇಶ್ವರ: ಮಂಜೇಶ್ವರ ಜನತೆಯ ಬಹುಕಾಲದ ಕನಸು ಇಂದು ಸಾಕಾರಗೊಂಡಿದೆ! ಮಂಜೇಶ್ವರ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಹಾಗೂ ಸದಸ್ಯರ ಬಹುದಿನಗಳ ನಿರೀಕ್ಷೆಯಾದ ನೂತನ ಪಂಚಾಯತ್ ಕಾಂಪ್ಲೆಕ್ಸ್‌ನ ಶಂಕುಸ್ಥಾಪನೆ ಇಂದು ವಿಜೃಂಭಣೆಯಿಂದ ನೆರವೇರಿತು.

₹1,30,86,923 ರೂಪಾಯಿ ವೆಚ್ಚದಲ್ಲಿ ಈ ಮೂರು ಅಂತಸ್ಥನ ನೂತನ ಕಟ್ಟಡವನ್ನು ಮಂಜೇಶ್ವರ ಮೀನು ಮಾರುಕಟ್ಟೆ ಪರಿಸರದಲ್ಲಿ ನಿರ್ಮಿಸಲಾಗುತ್ತಿದೆ. ಶಿಲಾನ್ಯಾಸ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಅವರು ನೆರವೇರಿಸಿದರು.

ಈ ಕಾಮಗಾರಿ ಪೂರ್ಣಗೊಂಡ ನಂತರ, ಮಂಜೇಶ್ವರ ಗ್ರಾಮ ಪಂಚಾಯತ್‌ಗೆ ಉತ್ತಮ ಕಾರ್ಯನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಸುಲಭವಾದ ಸೇವೆಗಳು ಒದಗಿಸಲು ಅವಕಾಶ ಸಿಗಲಿದೆ. ಸ್ಥಳೀಯ ಅಭಿವೃದ್ಧಿಗೆ ಇದು ದೊಡ್ಡ ಹಾದಿಯ ಹೆಜ್ಜೆಯಾಗಲಿದೆ.


ಈ ಸಂದರ್ಭ ಪಂಚಾಯತು ಉಪಾಧ್ಯಕ್ಷ ಮೊಹಮ್ಮದ್ ಸಿದ್ದೀಖ್, ಸದಸ್ಯರುಗಳಾದ ಮುಂತಾಸ್ ಸಮೀರ, ಯಾದವ ಬಡಾಜೆ, ರಾಧಾ, ಸುಪ್ರಿಯ, ಜಯಂತಿ, ರೇಖಾ, ಲಕ್ಷ್ಮಣ, ಕಾರ್ಯದರ್ಶಿ ಜಾರ್ಜ್ ಸೇರಿದಂತೆ ಹಲವರು ಉಪಸ್ಥರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!