ಪೈವಳಿಕೆಯ ಏದಾರ್‌ನಲ್ಲಿ ಅಮಾನವೀಯ ಕೃತ್ಯ: ಮನೆ ಪರಿಸರಕ್ಕೆ ಪಾಯಿಖಾನೆ ತ್ಯಾಜ್ಯ ಸುರಿದು ಪರಾರಿ!

​ಕಾಸರಗೋಡು: ಕತ್ತಲ ಮರೆಯಲ್ಲಿ ಬಂದು ಮನುಷ್ಯತ್ವವನ್ನೇ ಹರಾಜಿಗಿಟ್ಟ ಆಫಾತಕಾರಿ ಘಟನೆಯೊಂದು ಪೈವಳಿಕೆಯ ಏದಾರ್‌ನಲ್ಲಿ ನಡೆದಿದೆ.

ಬಡ ರಾಮ ಎಂಬವರ ಮನೆ ಪರಿಸರಕ್ಕೆ ಟ್ಯಾಂಕರ್ ಲಾರಿಯೊಂದರಲ್ಲಿ ತಂದ ಪಾಯಿಖಾನೆ ತ್ಯಾಜ್ಯವನ್ನು ರಾತ್ರೋರಾತ್ರಿ ಹರಿಯಬಿಟ್ಟು ಅಮಾನವೀಯ ವಿಕೃತಿ ಮೆರೆಯಲಾಗಿದೆ.

ದುರ್ವಾಸನೆಯಿಂದ ನರಕಯಾತನೆ ಅನುಭವಿಸುತ್ತಿರುವ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದು, ಇಡೀ ಗ್ರಾಮವೇ ಈ ನೀಚ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.

​ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರು ಹಾಗೂ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದು, ಪೊಲೀಸರು ಕೂಡಾ ತನಿಖೆ ಚುರುಕುಗೊಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಆ ಕ್ರೂರಿಗಳ ವಾಹನವನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದ್ದು, ಈ ದೌರ್ಜನ್ಯ ಎಸಗಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!