ಬದಿಯಡ್ಕ: ಕಳೆದುಹೋದ ಹಣದ ಪರ್ಸನ್ನು ಮೂಲ ವಾರಸುದಾರರಿಗೆ ಮರಳಿಸುವ ಮೂಲಕ ಇಲ್ಲೊಬ್ಬರು ವ್ಯಾಪಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತ ತಮ್ಮ ಉನ್ನತ ಪ್ರಾಮಾಣಿಕತೆ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹತ್ತು ದಿನಗಳ ಹಿಂದೆ ಬದಿಯಡ್ಕ ಬಸ್ ನಿಲ್ದಾಣದ ಬಳಿ ವ್ಯಾಪಾರಿ ಸಿದ್ದೀಕ್ ಮತ್ತು ಟೀ ಸ್ಟಾಲ್ ಮಾಲಕ ಅಶ್ರಫ್ ನೆಕ್ರಾಜೆ ಅವರಿಗೆ ಹಣವಿದ್ದ ಲೇಡೀಸ್ ಪರ್ಸ್ ಸಿಕ್ಕಿತ್ತು. ತಕ್ಷಣವೇ ಅವರು ಈ ವಿಷಯವನ್ನು ಸಾಮಾಜಿಕ ಕಾರ್ಯಕರ್ತ ಹಾರಿಸ್ ಬಿ. ಡಿ. ಕೆ ಅವರ ಗಮನಕ್ಕೆ ತಂದರು.
ಹಾರಿಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಫಲವಾಗಿ ಪರ್ಸ್ನ ನಿಜವಾದ ಮಾಲಕರು ಪತ್ತೆಯಾದರು. ಬಳಿಕ ಅವರನ್ನು ಅಂಗಡಿಗೆ ಕರೆಸಿ ಸುರಕ್ಷಿತವಾಗಿ ಪರ್ಸ್ ಹಸ್ತಾಂತರಿಸಲಾಯಿತು. ಈ ಮಾದರಿ ಕಾರ್ಯಕ್ಕೆ ಮೂವರಿಗೂ ಸಾರ್ವಜನಿಕರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.


