ಕಳೆದುಹೋದ ಪರ್ಸ್ ಮರಳಿಸಿ ಮಾನವೀಯತೆ ಮೆರೆದ ಮೂವರು!

​ಬದಿಯಡ್ಕ: ಕಳೆದುಹೋದ ಹಣದ ಪರ್ಸನ್ನು ಮೂಲ ವಾರಸುದಾರರಿಗೆ ಮರಳಿಸುವ ಮೂಲಕ ಇಲ್ಲೊಬ್ಬರು ವ್ಯಾಪಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತ ತಮ್ಮ ಉನ್ನತ ಪ್ರಾಮಾಣಿಕತೆ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

​ಹತ್ತು ದಿನಗಳ ಹಿಂದೆ ಬದಿಯಡ್ಕ ಬಸ್ ನಿಲ್ದಾಣದ ಬಳಿ ವ್ಯಾಪಾರಿ ಸಿದ್ದೀಕ್ ಮತ್ತು ಟೀ ಸ್ಟಾಲ್ ಮಾಲಕ ಅಶ್ರಫ್ ನೆಕ್ರಾಜೆ ಅವರಿಗೆ ಹಣವಿದ್ದ ಲೇಡೀಸ್ ಪರ್ಸ್ ಸಿಕ್ಕಿತ್ತು. ತಕ್ಷಣವೇ ಅವರು ಈ ವಿಷಯವನ್ನು ಸಾಮಾಜಿಕ ಕಾರ್ಯಕರ್ತ ಹಾರಿಸ್ ಬಿ. ಡಿ. ಕೆ ಅವರ ಗಮನಕ್ಕೆ ತಂದರು.

ಹಾರಿಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ಫಲವಾಗಿ ಪರ್ಸ್‌ನ ನಿಜವಾದ ಮಾಲಕರು ಪತ್ತೆಯಾದರು. ಬಳಿಕ ಅವರನ್ನು ಅಂಗಡಿಗೆ ಕರೆಸಿ ಸುರಕ್ಷಿತವಾಗಿ ಪರ್ಸ್ ಹಸ್ತಾಂತರಿಸಲಾಯಿತು. ಈ ಮಾದರಿ ಕಾರ್ಯಕ್ಕೆ ಮೂವರಿಗೂ ಸಾರ್ವಜನಿಕರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!