ಮಂಜೇಶ್ವರ: ಉದ್ಯಾವರ ಬಿ.ಎಸ್. ನಗರ ಅಂಗನವಾಡಿಯಲ್ಲಿ ದಿವಂಗತ ಮಾಜಿ ಪಂಚಾಯತ್ ಸದಸ್ಯ ಅಬ್ದುಲ್ ರಹೀಂ ರವರ ಭಾವಪೂರ್ಣ ಸ್ಮರಣಾರ್ಥವಾಗಿ ‘ಬಿ.ಎಸ್. ಚಾರಿಟಿ ವತಿಯಿಂದ ಪ್ರಾಯೋಜಿಸಲ್ಪಟ್ಟ ನೂತನ ಧ್ವಜಸ್ತಂಭವನ್ನು ಅತ್ಯಂತ ಅರ್ಥಪೂರ್ಣವಾಗಿ ಲೋಕಾರ್ಪಣೆ ಗೊಳಿಸಲಾಯಿತು.

ಅಂಗನವಾಡಿಯ ಅಭಿವೃದ್ಧಿಗೆ ಮತ್ತು ಶಿಸ್ತಿನ ವಾತಾವರಣಕ್ಕೆ ಕೊಡುಗೆ ನೀಡುವ ಈ ಉದಾತ್ತ ಕಾರ್ಯಕ್ರಮವು ದಿವಂಗತ ಅಬ್ದುಲ್ ರಹೀಂ ರವರ ಸತ್ಕಾರ್ಯ ಹಾಗೂ ದಯೆಯ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ನೆರವೇರಿತು.

ಈ ಶುಭ ಸಂದರ್ಭದಲ್ಲಿ ಸ್ಥಳೀಯ ವಾರ್ಡ್ ಸದಸ್ಯೆ ಫಾತಿಮತ್ ಸಬೀನಾ ಟೀಚರ್, ಅಂಗನವಾಡಿ ಶಿಕ್ಷಕಿ, ಕಾರ್ಯಕರ್ತೆಯರು ಹಾಗೂ ಊರಿನ ಪ್ರಮುಖರು ಸೇರಿದಂತೆ ಹಲವರು ಉಪಸ್ಥಿತರಿದ್ದು, ಅಂಗನವಾಡಿಗೆ ನೀಡಿರುವ ಈ ಅರ್ಥಪೂರ್ಣ ಕೊಡುಗೆಯನ್ನು ಅಭಿನಂದಿಸಿದರು.

