
ಮಂಜೇಶ್ವರ: ‘ಕರ್ಮಪಥದಲ್ಲಿ ಮೂರುವರೆ ದಶಕ’ ಎಂಬ ಸಂದೇಶದೊಂದಿಗೆ ಕೇರಳ ಸ್ಟೇಟ್ ಹೈಯರ್ ಗೈಡೆನ್ಸ್ ಓನರ್ಸ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ವಾಹನ ಪ್ರಚಾರ ಜಾಥಾಗೆ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಚಾಲನೆ ದೊರಕಿತು.

ಮಂಜೇಶ್ವರ ವಲಯದ ಹೊಸಂಗಡಿಯಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆದ ಸಮಾರಂಭದಲ್ಲಿ ಜಾಥಾವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ. ಹಂಸ ಎಸ್.ಎನ್.ಎಸ್. ಸ್ವಾಗತಿಸಿದರು. ಜಿಲ್ಲಾ ಸಚಿವಾಲಯದ ಸದಸ್ಯ ಕೆ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಹಾಗೂ ಕಾಸರಗೋಡು ಜಿಲ್ಲಾ ಉಸ್ತುವಾರಿ ಪಿ. ರವೀಂದ್ರನ್ ಅವರು ಜಾಥಾ ಉದ್ಘಾಟನೆಯನ್ನು ನೆರವೇರಿಸಿದರು.

ನಂತರ ರಾಜ್ಯ ಸಚಿವಾಲಯದ ಸದಸ್ಯ ಎನ್. ರಾಧಾಕೃಷ್ಣನ್, ಜಿಲ್ಲಾ ಉಪಾಧ್ಯಕ್ಷ ನಾಸರ್ ಮೂನ್ನಾಂ, ಜಿಲ್ಲಾ ಸಚಿವಾಲಯದ ಸದಸ್ಯರಾದ ಬಾಲನ್ ಬಳಾಂತ್ತೋಡ್, ಪ್ರಭಾಕರನ್ ಪಂಚಮಿ, ಸುಕುಮಾರನ್ ಕೊಪ್ಪಳಂ, ಮಂಜೇಶ್ವರ ವಲಯ ಅಧ್ಯಕ್ಷ ಪ್ರವೀಣ್ ಎಸ್.ಡಿ.ಎಸ್. ಹಾಗೂ ವಲಯ ಖಜಾಂಚಿ ಬಾಲಕೃಷ್ಣನ್ ಹೊಸಂಗಡಿ ಶುಭ ಹಾರೈಸಿ ಮಾತನಾಡಿದರು.ಮಂಜೇಶ್ವರ ವಲಯ ಕಾರ್ಯದರ್ಶಿ ಅಬ್ದುಲ್ ಲತೀಫ್ ವಂದಿಸಿದರು.

ಜಿಲ್ಲಾ ಅಧ್ಯಕ್ಷ ಕೆ. ಮುರಳೀಧರನ್ ಜಾಥಾ ನಾಯಕರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ. ಶಿಬು ಉಪನಾಯಕರಾಗಿ ಮತ್ತು ಜಿಲ್ಲಾ ಖಜಾಂಚಿ ಫಿರೋಜ್ ಪಡಿಞಾರ್ ಮ್ಯಾನೇಜರ್ ಆಗಿ ನೇತೃತ್ವ ವಹಿಸಿದ್ದಾರೆ.

ಕೆ. ಹಂಸ ಎಸ್.ಎನ್.ಎಸ್., ಕೆ. ಸುರೇಂದ್ರನ್ ಬಿಂದು, ಬಾಲನ್ ಬಳಾಂತ್ತೋಡ್, ನಾಸರ್ ಮೂನ್ನಾಂ, ಪ್ರಭಾಕರನ್ ಪಂಚಮಿ ಹಾಗೂ ಸುಕುಮಾರನ್ ಕೊಪ್ಪಳಂ ಜಾಥಾದ ಇತರ ಸದಸ್ಯರಾಗಿದ್ದಾರೆ.

ಮಂಜೇಶ್ವರದಿಂದ ತೃಕ್ಕರಿಪುರವರೆಗೆ ಸಾಗಲಿರುವ ಈ ಜಾಥಾ ನವೆಂಬರ್ 11 ಮತ್ತು 12ರಂದು ಸಂಚಾರ ನಡೆಸಲಿದೆ.
ಮಲಪ್ಪುರಂನಲ್ಲಿ ನಡೆಯಲಿರುವ ಸಂಘಟನೆಯ 10ನೇ ರಾಜ್ಯ ಸಮ್ಮೇಳನದ ಪ್ರಚಾರಾರ್ಥವಾಗಿ ಈ ವಾಹನ ಪ್ರಚಾರ ಜಾಥಾವನ್ನು ಆಯೋಜಿಸಲಾಗಿದೆ




