ಮಂಜೇಶ್ವರ: ಅಪಾಯಕಾರಿ ಮರಗಳ ತೆರವು; ಹೊಸಂಗಡಿಯನ್ನು ಮಾದರಿ ನಗರವನ್ನಾಗಿ ಮಾಡಲು ಕ್ರಮ – ಪಂಚಾಯತು ಅಧ್ಯಕ್ಷ ಬಶೀರ್ ಕನಿಲ

​ಮಂಜೇಶ್ವರ: ಬಸ್ ಸಂಚಾರಕ್ಕೂ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೂ ತೀವ್ರ ಭೀತಿಯಾಗಿದ್ದ ಅಪಾಯಕಾರಿ ಮರಗಳನ್ನು ನಿರಂತರ ವರದಿಗಳ ಬಳಿಕ ಎಚ್ಚೆತ್ತುಕೊಂಡ ಮಂಜೇಶ್ವರ ಗ್ರಾಮ ಪಂಚಾಯತ್ ತೆರವುಗೊಳಿಸಿದೆ.

​ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆದು ಹೊಸಂಗಡಿ ಅನೆಕಲ್ಲು ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿದ್ದ ಮರಗಳನ್ನು ಕಡಿದು ತೆರವುಗೊಳಿಸಲಾಗಿದೆ ಎಂದು ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ತಿಳಿಸಿದ್ದಾರೆ.

​ಮುಂದಿನ ದಿನಗಳಲ್ಲಿ ಹೊಸಂಗಡಿಯನ್ನು ಮಾದರಿ ನಗರವನ್ನಾಗಿ ರೂಪಿಸಲು ಸರ್ವ ರೀತಿಯ ಪ್ರಯತ್ನಗಳು ಉತ್ತಮ ಹಾದಿಯಲ್ಲಿ ಸಾಗುತ್ತಿವೆ ಎಂದು ಅವರು ಹೇಳಿದರು. ಅಲ್ಲದೆ, ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುವುದನ್ನು ತಡೆಯಲು, ಕೂಡಲೇ ವಾಣಿಜ್ಯ ಮಳಿಗೆಗಳ ಒಳಗಿರುವ ಮೀನು ಮಾರುಕಟ್ಟೆಯೊಳಗೆ ಮಾತ್ರ ಮೀನು ಮಾರಾಟ ನಡೆಸುವಂತೆ ಕಡ್ಡಾಯ ಆದೇಶ ಹೊರಡಿಸುವುದಾಗಿಯೂ ಅವರು ಸ್ಪಷ್ಟಪಡಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!