ಪಾವೂರು: ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ (ರಿ) ಬಜಾಲ್, ಪಾವೂರು ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಇದರ ಜಂಟಿ ಆಶ್ರಯದಲ್ಲಿ ತಾರೀಕು 15/೦8/25ರಂದು ಶುಕ್ರವಾರ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿರುವುದು.
ಬೆಳಿಗ್ಗೆ 10 ಗಂಟೆಗೆ ಮೊಸರು ಕುಡಿಕೆ ಕಾರ್ಯಕ್ರಮವನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಮನೋಹರ್ ಶೆಟ್ಟಿ ಕೆದುಂಬಾಡಿ ಉದ್ಘಾಟಿಸಲಿರುವರು. ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿರುವುದು.
ಸಂಜೆ 5ಕ್ಕೆ ಸಮರೋಪ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಯು ನಡೆಯಲಿಕ್ಕಿದೆ. ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷರಾದ ಮೋನಪ್ಪ ಶೆಟ್ಟಿ ಮುಟ್ಲ ವಹಿಸಲಿದ್ದಾರೆ. ಸಭೆಯಲ್ಲಿ ಶ್ರೀಧರ ಶೆಟ್ಟಿ ಪಾವೂರು , ವಿಶ್ವಂಭರ ನಾಯ್ಕ್ ಮಳಿಗುತ್ತು, ಗಣೇಶ್ ಟೈಲರ್ ಪಾವೂರು, ದಯಾನಂದ ಸಾಲಿಯಾನ್ ಕೊಪ್ಪಳ,ತ್ಯಾಂಪಣ್ಣ ರೈ ಪಾವುರು, ಕೋಟೀಯಪ್ಪ ಪೂಜಾರಿ ಕೊಪ್ಪಳ, ಮುಂತಾದವರು ಗೌರವ ಉಪಸ್ಥಿತಿ ಇರುವರು. ನಂತರ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆಯೂ ನಡೆಯಲಿರುವುದು.