ಪ್ರಧಾನಮಂತ್ರಿ ಆವಾಸ್ ಯೋಜನೆ ಹಣ ದುರುಪಯೋಗ: ಮಂಜೇಶ್ವರ ಬ್ಲಾಕ್ ಪಂಚಾಯತ್ ಕ್ಲರ್ಕ್ ಅಮಾನತು

ಮಂಜೇಶ್ವರ : ​ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರ ಮನೆ ನಿರ್ಮಾಣಕ್ಕೆ ಸಲ್ಲಬೇಕಿದ್ದ 17 ಲಕ್ಷ ರೂಪಾಯಿ ಅನುದಾನವನ್ನು ಗುಳುಂ ಮಾಡಿದ ಆರೋಪದ ಮೇಲೆ ಮಂಜೇಶ್ವರ ಬ್ಲಾಕ್ ಪಂಚಾಯತ್‌ನ ಹಿರಿಯ ಕ್ಲರ್ಕ್ ಸಿ. ಎನ್. ರಾಮದಾಸ್ ಅವರನ್ನು ಅಮಾನತುಗೊಳಿಸಲಾಗಿದೆ.

​ತ್ರಿಶೂರು ನಿವಾಸಿಯಾದ ಇವರು, ನಕಲಿ ಬಿಲ್ ಸೃಷ್ಟಿಸಿ 15 ಫಲಾನುಭವಿಗಳ 16,80,000 ರೂ. ಹಣವನ್ನು ತಮ್ಮ ನಾಲ್ಕು ಖಾಸಗಿ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು.

ಹಿಂದೆಯೂ ಆರ್ಥಿಕ ಅವ್ಯವಹಾರದ ಕಾರಣಕ್ಕೆ ಶಿಕ್ಷಾರ್ಹ ವರ್ಗಾವಣೆಯಲ್ಲಿ ಮೇ 4ರಂದು ಇಲ್ಲಿಗೆ ಬಂದಿದ್ದರೂ, ಮತ್ತದೇ ಅಕ್ರಮ ಮುಂದುವರಿಸಿದ್ದರು.

ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಕೆ. ಹರೀಶ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಇಲಾಖೆಯು ಕಠಿಣ ಕ್ರಮ ಕೈಗೊಂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!