ನ್ಯಾಯ ಕ್ಷೇತ್ರದ ದಂತಕಥೆ, ಹಿರಿಯ ನ್ಯಾಯವಾದಿ ದಿ. ಶ್ರೀ ಎಂ.ಕೆ. ವಿಜಯ ಕುಮಾರ್ ಅವರ ಸ್ಮರಣಾರ್ಥ ಮಂಗಳೂರಿನ ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದಲ್ಲಿ ‘ಸ್ಮಾರಕ ಉಪನ್ಯಾಸ’ ಮತ್ತು ವಿದ್ಯಾರ್ಥಿ ಸಹಾಯ ನಿಧಿ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನ ಸಭಾಭವನದಲ್ಲಿ ನವೆಂಬರ್ 28, ಶನಿವಾರ ಅಪರಾಹ್ನ 3.30 ಗಂಟೆಗೆ ಜರುಗಲಿರುವುದು.

ಘನ ಉಪಸ್ಥಿತಿ: ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರು ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎಸ್. ಅಬ್ದುಲ್ ನಜೀರ್ ಅವರು ಕಾರ್ಯಕ್ರಮಕ್ಕೆ ಘನ ಉಪಸ್ಥಿತಿ ನೀಡಲಿದ್ದಾರೆ.
ಸ್ಮಾರಕ ಉಪನ್ಯಾಸ: ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲರಾದ ಶ್ರೀ ಉದಯ ಹೊಳ್ಳ ಅವರು ಸ್ಮಾರಕ ಉಪನ್ಯಾಸ ನೀಡಲಿದ್ದಾರೆ.
ಗೌರವ ಅತಿಥಿಗಳು: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ಶೆಣವ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ, ವಕೀಲರಿಗೆ, ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಆತ್ಮೀಯ ಸ್ವಾಗತವಿದೆ ಎಂದು ಗುರುವಂದನಾ ಸಮಿತಿಯ ಅಧ್ಯಕ್ಷರಾದ ವಕೀಲ ಶ್ರೀ ಬಿ. ಭರತ್‌ರಾಜ್, ಕಾರ್ಯಕ್ರಮದ ಸಂಯೋಜಕರಾದ ಡಾ. ಡಿಂಪಲ್ ಮೇಸ್ತ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರಾನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

