ಮಂಜೇಶ್ವರ :ಸೋಮವಾರದಿಂದ ನಾಪತ್ತೆಯಾಗಿದ್ದ ಬಾಬು ಶೆಟ್ಟಿ ಮೃತದೇಹವಾಗಿ ಪತ್ತೆ

ಮಂಜೇಶ್ವರ : ಕುಂಜತ್ತೂರು ಗೋಳಿಯಡಿಯ ನಿವಾಸಿ ಬಾಬು ಶೆಟ್ಟಿ (77) ಎಂಬುವರು ನೇಣು ಬಿಗಿದುಕೊಂಡು ಶವವಾಗಿ ಪತ್ತೆಯಾಗಿದ್ದಾರೆ.

ಮನೆಯಲ್ಲಿ ಊಟ ಮಾಡಿ ಮಲಗಿದ್ದ ಇವರು, ಸೋಮವಾರದಿಂದ ಕಾಣೆಯಾಗಿದ್ದರು. ಆತಂಕಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದಾಗ, ಮನೆ ಸಮೀಪದ ದನದ ಕೊಟ್ಟಿಗೆಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

​ತಕ್ಷಣವೇ ಅವರನ್ನು ಮಂಗಲ್ಪಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರೆಂದು ವೈದ್ಯರು ದೃಢಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

SHARE
Loading spinner

One thought on “ಮಂಜೇಶ್ವರ :ಸೋಮವಾರದಿಂದ ನಾಪತ್ತೆಯಾಗಿದ್ದ ಬಾಬು ಶೆಟ್ಟಿ ಮೃತದೇಹವಾಗಿ ಪತ್ತೆ

Leave a Reply

Your email address will not be published. Required fields are marked *

error: Content is protected !!