ಕುಂಬಳೆ:: 79ನೇ ಸ್ವಾತಂತ್ರ್ಯೋತ್ಸವವನ್ನು ಐಟೆಕ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಕುಂಬಳೆಯಲ್ಲಿ ಆಚರಿಸಲಾಯಿತು. ಕುಂಬಳೆ ಗ್ರಾಮ ಪಂಚಾಯತ್ ಸದಸ್ಯೆಯಾದ ಶ್ರೀಮತಿ ವಿದ್ಯಾಪೈ ಧ್ವಜರೋಹಣಗೈದು ಶುಭ ಹಾರೈಕೆ ಮಾಡಿದರು.
ಮಹಮ್ಮಾಯ ಟ್ರೇಡರ್ಸ್ ಮಾಲಕರಾದ ಸಂದೇಶ ಭಟ್, ವೈದ್ಯರಾದ ಗಣೇಶ್, ಕುಂಬಳೆ ಮಾಸ್ಟರ್ ಬುಕ್ ಹೌಸಿನ ಮಾಲಕೀಯರಾದ ಶ್ರೀಮತಿ ರಾಜೇಶ್ವರಿ, ವ್ಯಾಪಾರಸ್ಥರಾದ ಗೋಕುಲ್ ದಾಸ್ ರವರು ಉಪಸ್ಥಿತರಿದ್ದರು. ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲರಾದ ರವಿ ಮುಡಿಮಾರು ಸ್ವಾಗತಿಸಿ ವಂದಿಸಿದರು.