ಮಂಜೇಶ್ವರ ಗ್ರಾಮ ಪಂಚಾಯತು ಹಾಗೂ ಕೃಷಿಭವನದ ಸಂಯುಕ್ತಾಶ್ರಯದಲ್ಲಿ ಕೃಷಿಕ ದಿನಾಚರಣೆ.

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ಹಾಗೂ ಕೃಷಿಭವನದ ಸಂಯುಕ್ತಾಶ್ರಯದಲ್ಲಿ ಕೃಷಿಕ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಜೇಶ್ವರ ಕಲಾಸ್ಪರ್ಶಂ ಆಡಿಯಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಂಜೇಶ್ವರ ವಿಧಾನಸಭಾ ಸದಸ್ಯ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿ ಮಾತನಾಡಿದರು.

ನಂತರ, ಅವರು ವಿವಿಧ ವರ್ಗಗಳ ಕೃಷಿಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೇರೋ ವಹಿಸಿದ್ದರು. ಕೃಷಿ ಅಧಿಕಾರಿ ಶ್ರೀ ಶ್ರೀನಾಥ್ ಸ್ವಾಗತ ಭಾಷಣ ನೀಡಿದರು.

ವೇದಿಕೆಯಲ್ಲಿ ಪಂಚಾಯತು ಉಪಾಧ್ಯಕ್ಷ ಶ್ರೀ ಮುಹಮ್ಮದ್ ಸಿದ್ದಿಕ್, ಮಂಜೇಶ್ವರ ಬ್ಲಾಕ್ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಸದಸ್ಯರಾದ ಯಾದವ್ ಬಡಾಜೆ, ಶ್ರೀಮತಿ ಮುಶ್ರತ್ ಜಹಾನ್, ಅಯ್ಯಿಶತುಲ್ ರುಬೀನ, ಶ್ರೀ ರಾಜೇಶ್, ಶ್ರೀಮತಿ ಜಯಂತಿ, ಶ್ರೀ ಲಕ್ಷ್ಮಣ ಹಾಗೂ ಮಂಜೇಶ್ವರ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶ್ರೀ ರಾಮಚಂದ್ರ ಅವರು ಭಾಗವಹಿಸಿದ್ದರು.

ಸಮಾರಂಭದಲ್ಲಿ, 25 ಎಸ್ಸಿ ವರ್ಗದ ಕೃಷಿಕರಿಗೆ ತೆಂಗಿನ ಗಿಡಳನ್ನೂ ಹಾಗೂ 10 ಎಸ್ಸಿ ವರ್ಗದ ಕೃಷಿಕರಿಗೆ ತೆಂಗು ಹತ್ತುವ ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.ಈ ಸಮಾರಂಭದಲ್ಲಿ ಸುಮಾರು 140ಕ್ಕೂ ಹೆಚ್ಚು ಕೃಷಿಕರು ಭಾಗವಹಿಸಿದ್ದರು. ಸಮಾರೋಪದಲ್ಲಿ, ಮಂಜೇಶ್ವರ ಕೃಷಿಭವನದ ಹಿರಿಯ ಕೃಷಿ ಸಹಾಯಕಿ ಶ್ರೀಮತಿ ಉಷಾಕುಮಾರಿ ಧನ್ಯವಾದ ಅರ್ಪಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!