ಕುಂಬಳೆ ಸಮೀಪದ ಕಳತ್ತೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮಂಜೇಶ್ವರ ತಾಲೂಕು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿ.ಸಿ. ಟ್ರಸ್ಟ್(ರಿ) ಮಂಜೇಶ್ವರ ತಾಲೂಕು , ಕಳತ್ತೂರು ಶ್ರೀ ಮಹಾದೇವ ನವಜೀವನ ಸಮಿತಿ ಹಾಗೂ ಜಿಲ್ಲಾ ನವಜೀವನ ಆಶ್ರಯದಲ್ಲಿ ದ್ವಿತೀಯ ವರ್ಷದ ನವಜೀವನೋತ್ಸವದ ಅಂಗವಾಗಿ ಕೇಸರ್ದ ಕಂಡೊಡು ಕುಸಲ್ದ ಗೊಬ್ಬುಲು ಕಾರ್ಯಕ್ರಮ ಇಚ್ಲಂಪಾಡಿ ಗದ್ದೆಯಲ್ಲಿ ಇತ್ತೀಚೆಗೆ ನಡೆಯಿತ್ತು . ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಿದರು . ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕಿನ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ ಅಧ್ಯಕ್ಷ ಸ್ಥಾನ ವಹಿಸಿದರು .
ಶ್ರೀ ಜೀವನಾಥ್ ಜೋಡುಕಟ್ಟೆ ಅವರು ಸಂಘಟಕರಾದ ಶ್ರೀ ರಿತೇಶ್ ಆಳ್ವ ಅವರಿಗೆ ಸಾಂಪ್ರದಾಯಿಕವಾದ ಮುಟ್ಟಳೆ ತೊಡಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕಿನ ನಿಕಟಪೂರ್ವ ಅದ್ಯಕ್ಷರಾದ ಶ್ರೀ ಅಶ್ವಥ್ ಪೂಜಾರಿ ಲಾಲ್ಬಾಗ್ , ಜನಜಾಗೃತಿ ವೇದಿಕೆ ಕುಂಬಳೆ ವಲಯದ ಅಧ್ಯಕ್ಷರಾದ ಶ್ರೀ ಮಹೇಶ್ ಪುಣಿಯೂರು , ಪಂಚಾಯತ್ ಸದಾಸ್ಯರಾದ ಶ್ರೀಮತಿ ಪುಷ್ಪಲತಾ ಕಾಜೂರು , ಪಂಚಾಯತ್ ಮಾಜಿ ಸದಾಸ್ಯರಾದ ಶ್ರೀ ಸುಕೇಶ್ ಭಂಡಾರಿ , ನಿವೃತ್ತ ಗ್ರಾಮಾಧಿಕಾರಿ ಶಿವರಾಮ ಶೆಟ್ಟಿ ಮಾಣಿಬೆಟ್ಟು , ಶ್ರೀ ಮಹಾದೇವ ಭಜನಾ ಮಂದಿರದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ನೆಲ್ಯಡ್ಕ , ಜನಜಾಗೃತಿ ಬೆಳ್ತಂಗಡಿ ಪ್ರಾದೇಶಿಕ ಯೋಜನಾಧಿಕಾರಿ ಶ್ರೀ ಗಣೇಶ್ ಆಚಾರ್ಯ , ಕುಂಟಂಗೇರಡ್ಕ ಶ್ರೀ ಕುಪ್ಪೆ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷರಾದ ಶ್ರೀ ಚಂದ್ರ ಕಾಜೂರು , ಸಾಮಾಜಿಕ ಮುಂದಾಳು ಶ್ರೀ ಕೆ.ಸಿ. ಮೋಹನ್ , ಕೃಷಿಕರಾದ ಆನಂದ ರೈ ಕಾಜೂರು , ಶ್ರೀ ನಿತೇಶ್ , ವಲಯದ ಮೇಲ್ವಿಚಾರಕರಾದ ಶ್ರೀ ಅಭಿಷೇಕ್ , ವಲಯದ ಸೇವಾಪ್ರತಿನಿಧಿಗಳು , ಕಾಸರಗೋಡು ವಲಯದ ಹಾಗೂ ಮಂಜೇಶ್ವರ ವಲಯದ ಶೌರ್ಯ ವಿಪತ್ತು ನಿರ್ವಾಹಣ ಘಟಕದ ಸ್ವಯಂ ಸೇವಕರು , ಸೀತಾಂಗೋಳಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಸರಿತ ಸೀತಾಂಗೋಳಿ , ಜಿಲ್ಲಾ ನವಜೀವನ ಸಮಿತಿಯ ಪದಾಧಿಕಾರಿಗಳು , ಸದಾಸ್ಯರು , ಒಕ್ಕೂಟ ಪದಾಧಿಕಾರಿಗಳು , ಸಂಘದ ಸದಸ್ಯರು ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಕೇಸರು ಗದ್ದೆಯಲ್ಲಿ ಕಳತ್ತೂರು ಒಕ್ಕೂಟದವರಿಂದ ಜಾನಪದ ನೃತ್ಯ ವೈಭವ ಮೂಡಿಬಂತು , ಹಾಗೂ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು , ಹಾಗೂ ಮೂರು ಕ್ರೀಡಾಪಟ್ಟು ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು . ಕಳತ್ತೂರು ಶ್ರೀ ಮಹಾದೇವ ನವಜೀವನ ಸಮಿತಿಯ ವರದಿಯನ್ನು ಸತೀಶ್ ದಂಡೆಗೋಳಿ ಮಂಡಿಸಿದರು . ಶ್ರೀಮತಿ ಅಶ್ವಿನಿ .ಎo. ಪೆರುವಾಯಿ ನಿರೂಪಿಸಿದರು , ಮಂಜೇಶ್ವರ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣ ಸ್ವಾಗತಿಸಿ , ಶ್ರೀ ನಾರಾಯಣ ಟೈಲರ್ ಕಳತ್ತೂರು ವಂದಿಸಿದರು . ಸಮರೋಪ ಸಮಾರಂಭದಲ್ಲಿ ಶ್ರೀ ನಾರಾಯಣ ಟೈಲರ್ ಕಳತ್ತೂರು ಅಧ್ಯಕ್ಷ ಸ್ಥಾನ ವಹಿಸಿದರು . ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕಿನ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟತ್ತೋಡಿ , ಇಚ್ಲಂಪಾಡಿ ಶಾಲಾ ನಿವೃತ್ತ ಮುಖೋಪಾಧ್ಯರಾದ ಶ್ರೀ ನರಹರಿ ಮಾಸ್ಟರ್ ಕಳತ್ತೂರು , ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕಿನ ಉಪಾಧ್ಯಕ್ಷರಾದ ಶ್ರೀ ಹರೀಶ್ ಕಡಂಬಾರು , ಇಚ್ಲಂಪಾಡಿ ಶಾಲಾ ಮುಖೋಪಾಧ್ಯರಾದ ಶ್ರೀ ಬಾಲಕೃಷ್ಣ ಆಚಾರ್ಯ ಪುತ್ತಿಗೆ , ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕಿನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಅಶ್ವಥ್ ಪೂಜಾರಿ ಲಾಲ್ಬಾಗ್ , ಶ್ರೀ ಜೀವನಾಥ ಜೋಡುಕಟ್ಟೆ , ಕೃಷಿಕರಾದ ಆನಂದ ರೈ ಕಾಜೂರು ಉಪಸ್ಥಿತರಿದರು . ಈ ಸಂದರ್ಭದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು . ಮಡಕೆ ಒಡೆಯುವ ಸ್ಪರ್ದೆಯಲ್ಲಿ ಅಕ್ಷಿತ ಬಹುಮಾನ ಪಡೆದರು . ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಶಶಿಕಲಾ ಅಭಿಮಾನಿ ಬಳಗ ತಂಡ ಪ್ರಥಮ ಸ್ಥಾನ ಪಡೆದರು , ವರ್ಷ ಅಭಿಮಾನಿ ಬಳಗ ತಂಡ ದ್ವಿತೀಯ ಸ್ಥಾನ ಪಡೆದರು , ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸೈಜೇಶ್ ಕಾಸರಗೋಡು ಅಭಿಮಾನಿ ಬಳಗ ತಂಡ ಪ್ರಥಮ ಸ್ಥಾನ ಪಡೆದರು , ಅಶೋಕ ಅಭಿಮಾನಿ ಬಳಗ ತಂಡ ದ್ವಿತೀಯ ಸ್ಥಾನ ಪಡೆದರು . ಈ ಕಾರ್ಯಕ್ರಮಕ್ಕೆ ಸತೀಶ್ ದಂಡೆಗೋಳಿ ಸ್ವಾಗತಿಸಿ , ಮಡ್ವ ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ಸರಿತ ವಂದಿಸಿದರು.