ಶತಾಯಗತಾಯ ಅಧಿಕಾರ ಉಳಿಸಿಕೊಳ್ಳುವ ಧಾವಂತದಲ್ಲಿ ಬಿಜೆಪಿಯು ನಿರ್ಲಜ್ಜವಾಗಿ ಓಟ್ ಕಳ್ಳತನ ನಡೆಸಿದ್ದು ಜಗಜ್ಜಾಹೀರಾಗಿದೆ. ಒಂದೆಡೆ ಲಕ್ಷಾಂತರ ನಕಲಿ ಮತದಾರರ ಸೇರ್ಪಡೆಗೊಳಿಸಿ ತಮ್ಮ ಓಟ್ ಗಳ ಸಂಖ್ಯೆ ಹೆಚ್ಚಿಸುವುದು ಹಾಗೂ ಅರ್ಹ ಮತದಾರರನ್ನು ಅಂತಿಮ ಮತದಾರ ಪಟ್ಟಿಯಿಂದ ಹೊರತು ಪಡಿಸಿ ವಿಪಕ್ಷಗಳ ಬಲ ಕುಗ್ಗಿಸುವುದು ಮುಂತಾದ ವಾಮ ಮಾರ್ಗಗಳ ಮೂಲಕ ಆಡಳಿತವನ್ನು ಕದಿಯಲಾಗಿದೆ.
ಇದಕ್ಕೆ ಚುನಾವಣಾ ಆಯೋಗವೂ ಕೈ ಜೋಡಿಸಿದ್ದು ವಿಪರ್ಯಾಸ. ಬಿಜೆಪಿಯಿಂದ ಮಾಸಿಕ ಚಂದಾ ಪಡೆಯುವ ಮಾನಗೇಡಿ ಮಡಿಲ ಮಾಧ್ಯಮಗಳು ಎಲ್ಲವನ್ನು ಕಂಡೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಇದರ ವಿರುದ್ಧ ರಾಹುಲ್ ಗಾಂಧಿಯವರು ಆರಂಭಿಸಿದ ಹೋರಾಟ ದೇಶದಾದ್ಯಂತ ವ್ಯಾಪಿಸಲಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ.
ಅವರು ಓಟ್ ಕಳ್ಳತನ ಪ್ರತಿಭಟಿಸಿ ದೇಶದ ವಿಪಕ್ಷ ನಾಯಕ ಶ್ರೀ ರಾಹುಲ್ ಗಾಂಧಿಯವರು ನಡೆಸುತ್ತಿರುವ “ಓಟರ್ ಅಧಿಕಾರ್ ಯಾತ್ರಾ ” ದ ಬಿಹಾರದ ಸಮಾಪನ ಸಭೆಯ ಪ್ರಯುಕ್ತ ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಬಂದ್ಯೋಡುವಿನಲ್ಲಿ ನಡೆಸಿದ ಬೆಂಬಲ ಸೂಚಕ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.
ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಾಬು ಬಂದ್ಯೋಡುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾರರಾದ ಮುಹಮ್ಮದ್ ಸೀಗಂಡಡಿ, ಬರ್ನಾರ್ಡ್ ಡಿ’ಅಲ್ಮೇಡಾ, ನವೀನ್ ಶೆಟ್ಟಿ ಚೆರುಗೋಳಿ, ರಾಜೇಶ್ ನಾಯ್ಕ್ ಹೇರೂರು, ಬಾಬು ಇಚ್ಲಂಗೋಡು, ಮುಹಮ್ಮದ್ ಮೇರ್ಕಳ, ಇಬ್ರಾಹಿಂ ಹಾಜಿ ಇಚ್ಲಂಗೋಡು, ಗೀತಾ ಬಂದ್ಯೋಡು, ಕುಂಞಾಲಿ ಇಚ್ಲಂಗೋಡು, ಸುಂದರ, ಇಸ್ಮಾಯಿಲ್ ಬೇಕೂರು, ಮೊಹಮ್ಮದ್ ಹನೀಫ್, ಮುಹಮ್ಮದ್ ಮಲಂದೂರು, ಶಫೀಕ್ ದೀನಾರ್ ನಗರ, ರಝಾಕ್ ಅಡ್ಕ, ತುಳಸೀಧರ ಮುಟ್ಟಂ, ಔಫ್ ಕಟ್ಟ, ಹನೀಫ್ ಪೆರಿಂಗಡಿ, ಮುಹಮ್ಮದ್ ಓಣಂದ, ಹನೀಫ್ ವರ್ಕಾಡಿ ಮುಟ್ಟಂ ಮುಂತಾದವರು ಭಾಗವಹಿಸಿದರು. ಶ್ರೀ ಅಶ್ರಫ್ ಮುಟ್ಟಂ ಸ್ವಾಗತಿಸಿ, ಶ್ರೀ ಶಿಹಾಬ್ ಎಂಕೆ ವಂದಿಸಿದರು.