ಕಾಸರಗೋಡು : ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮನೆ ಗೃಹಿಣಿಯೊಬ್ಬರು ರಸ್ತೆ ದಾಟುತ್ತಿರುವ ಮಧ್ಯೆ ಕಾರೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಗೃಹಿಣಿಯೊಬ್ಬರು ಸಾವನ್ನಪ್ಪಿದ್ದಾರೆ.
ಅಡ್ಕತ್ತ ಬೈಲ್ ಕಲ್ಲುವಳಪ್ಪಿಲ್ ನಿವಾಸಿ ಯೂಸುಫ್ ಎಂಬವರ ಧರ್ಮ ಪತ್ನಿ ನಸಿಯಾ (51) ಸಾವನ್ನಪ್ಪಿದ ದುರ್ದೈವಿ.
ಬಾನುವಾರ ಸಂಜೆ 5.25 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ನಸಿಯಾ ರಸ್ತೆ ದಾಟುತ್ತಿರುವ ಮಧ್ಯೆ ಅಮಿತ ವೇಗದಲ್ಲಿ ಆಗಮಿಸಿದ ಕಾರೊಂದು ಡಿಕ್ಕಿ ಹೊಡೆದು ಮೇಲಕ್ಕೆಸೆದಿದೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಈ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆಯಾಗಿದೆ.