ಕಾಸರಗೋಡು ಕನ್ನಡ ಗ್ರಾಮೋತ್ಸವ 2025 ನವಂಬರ್ 4ಕ್ಕೆ

ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನಾಚರಣೆ – ಜನ್ಮ ವರ್ಷಾಚರಣೆ ,ಅಭಿನಂದನಾ ಕಾರ್ಯಕ್ರಮವನ್ನು ಕೇರಳ – ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಉತ್ಸವವನ್ನಾಗಿಸಿ ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ – ‘ಕಾಸರಗೋಡು ಕನ್ನಡ ಗ್ರಾಮೋತ್ಸವ ‘2025 ಎಂಬ ಶೀರ್ಷಿಕೆಯ ಹೆಸರಿನಲ್ಲಿ ಕಾರ್ಯಕ್ರಮವನ್ನು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ಅಪರಾಹ್ನ ಗಂಟೆ 2 ರಿಂದ ರಾತ್ರಿ 9 ರ ತನಕ ಆಯೋಜಿಸಲಾಗಿದೆ.


ಕನ್ನಡ ಗ್ರಾಮದ ಆವರಣದಲ್ಲಿ ಶಿವರಾಮ ಕಾಸರಗೋಡು – 60 ‘ಫೋಟೋ ಗ್ಯಾಲರಿ’ಯಲ್ಲಿ ದೇಶ,ವಿದೇಶಗಳಲ್ಲಿ ನಡೆದ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಖ್ಯಾತ ಛಾಯಾ ಚಿತ್ರಕಾರದಿಂದ, ಕಲಾವಿದರಿಂದ ಏರ್ಪಡಿಸಲಾಗಿದೆ. ಕೇರಳ ಮತ್ತು ಕರ್ನಾಟಕ ರಾಜ್ಯದ ಹಿರಿಯ ಯುವ, ಗಾಯಕ ಗಾಯಕಿಯರಿಂದ ಕನ್ನಡ ಗೀತೆಗಳ ಸಮೂಹ ಗಾಯನವನ್ನು ಹಮ್ಮಿಕೊಳ್ಳಲಾಗಿದೆ. ಅಂತಾರಾಜ್ಯದ ಖ್ಯಾತ ಗಾಯಕ, ಗಾಯಕಿಯರಿಂದ, ಕಲಾವಿದರಿಂದ ಸಂಗೀತ,ನೃತ್ಯ, ಸುಗಮ ಸಂಗೀತ,ದಾಸ ಸಂಕೀರ್ತನೆ, ಭಕ್ತಿ,ಭಾವ, ಜಾನಪದ, ಚಲನಚಿತ್ರ ಗೀತಾ ಗಾಯನವನ್ನು ಏರ್ಪಡಿಸಲಾಗಿದೆ.


ಕನ್ನಡ ಗ್ರಾಮದಲ್ಲಿ ಸೂರ್ಯೋದಯದಿಂದ ಸುಪ್ರಭಾತ ಗಾಯನದೊಂದಿಗೆ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭುವನೇಶ್ವರಿಯ ಛಾಯಾ ಚಿತ್ರದ ಅನಾವರಣದೊಂದಿಗೆ ಕನ್ನಡಮ್ಮನ ಕನ್ನಡ ಗ್ರಾಮದಲ್ಲಿ ಶಿವರಾಮ ಕಾಸರಗೋಡು ಅವರ 60 ನೇ ಜನ್ಮ ದಿನೋತ್ಸವಕ್ಕೆ ಸಂಬಂಧಪಟ್ಟ ಧಾರ್ಮಿಕ ಸಂಪ್ರದಾಯದ ಪೂಜೆ ಪುರಸ್ಕಾರದ ಆಚರಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.


ಬೆಳಿಗ್ಗೆ ಗಂಟೆ 11.00 ಕ್ಕೆ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ,ಕನ್ನಡ ಕವಿ ಗೋಷ್ಠಿ ನಡೆಯಲಿದೆ.
ಕಾಸರಗೋಡು ಕನ್ನಡಿಗ – ಗಡಿನಾಡು – ಹೊರನಾಡು ಕನ್ನಡಿಗ – ಕರ್ನಾಟಕ ಸರಕಾರ- ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಗಡಿನಾಡು ಕಾಸರಗೋಡು ಪ್ರದೇಶದ ಕನ್ನಡ ಭಾಷೆ, ಸಾಹಿತ್ಯ,ಶಿಕ್ಷಣ,ಸಂಸ್ಕೃತಿ, ಇತಿಹಾಸವನ್ನು ಸಂರಕ್ಷಿಸಿ ಉಳಿಸಿ ಬೆಳೆಸುವ ಕುರಿತು ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಾಧಕರೊಂದಿಗೆ ಸಂವಾದ, ಚರ್ಚೆ ನಡೆಸಿ ಕಾಸರಗೋಡು ಕನ್ನಡಿಗರ ಉದ್ಯೋಗ,ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು,ಉಪ ಮುಖ್ಯಮಂತ್ರಿಗಳು,ಸಚಿವರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಇವರಲ್ಲಿಗೆ ಕಾಸರಗೋಡು ಕನ್ನಡಿಗರನ್ನೊಳಗೊಂಡು, ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳ ಪ್ರಾತಿನಿಧಿಕವಾದ ಉನ್ನತ ಮಟ್ಟದ ನಿಯೋಗವನ್ನು ಕೊಂಡೊಯ್ಯಲು ರೂಪುರೇಷೆ ಸಿದ್ದ ಪಡಿಸಲಾಗುವುದು.


ಕಾಸರಗೋಡು ಕನ್ನಡ ಗ್ರಾಮೋತ್ಸವದಂದು ವಿವಿಧ 60 ಭಜನಾ ಸಂಕೀರ್ತನಾ ಸಂಘಗಳು, ಮಕ್ಕಳು, ಮಹಿಳಾ ಭಜನಾ ಮಂಡಳಿಗಳು, ಸಂಗೀತ ಕಲಾ ಸಂಘಟನೆಗಳ 60 ಮಂದಿ ಗಾಯಕ, ಗಾಯಕಿರಿಂದ, ‘ಸಮೂಹ ಸಂಕೀರ್ತನಾ ದಾಸೋಹ ಗಾಯನೋತ್ಸವ’ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಿಂದ ಕುಣಿತ ಭಜನೆ,ಮಕ್ಕಳಿಂದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಲಾಗುದು.
ಕೀರ್ತಿ ಶೇಷರಾದ 60 ಮಂದಿ ಕಾಸರಗೋಡು ಕನ್ನಡ ಹೋರಾಟಗಾರರು, ಮುಖಂಡರ ಭಾವಚಿತ್ರ – ಬದುಕು – ಬರೆಹ ಕುರಿತು ತಮ್ಮ ಕುಟುಂಬಸ್ಥರು ಸಂಕ್ಷಿಪ್ತವಾಗಿ ಮಾಹಿತಿ ಕಳುಹಿಸಲು ವಿನಂತಿ


ಕರ್ನಾಟಕ ಏಕೀಕರಣ, ಕಾಸರಗೋಡು ವಿಲೀನೀಕರಣಕ್ಕಾಗಿ ಬಹುಕಾಲದಿಂದ ಕನ್ನಡ, ಕನ್ನಡಿಗರ ಹೋರಾಟಗಳಿಗೆ ಹಾಗೂ ಗಡಿನಾಡು ಕಾಸರಗೋಡಿನಲ್ಲಿ ಮಹಾಜನ ಆಯೋಗದ ವರದಿ ಜ್ಯಾರಿಗಾಗಿ ಒತ್ತಾಯಿಸಿ ನಡೆದ ಹಲವು ಕಾಸರಗೋಡು ಸಮ್ಮೇಳನ,ಕಾಸರಗೋಡು ಕನ್ನಡಿಗರ ಸಮ್ಮೇಳನ, ಕನ್ನಡ ಸಮ್ಮೇಳನ ಕನ್ನಡ ಸಮಾವೇಶಗಳನ್ನು ನಿರಂತರವಾಗಿ ಸಂಘಟಿಸಿ, ಕನ್ನಡ ಸಂಘಟನೆಗಳಲ್ಲಿ ಆವಿರತವಾಗಿ ದುಡಿದು , ಯಾವುದೇ ಪ್ರಚಾರ ಬಯಸದೇ ಸೇವೆ ಸಲ್ಲಿಸಿ ಕೀರ್ತಿ ಶೇಷರಾದ 60 ಮಂದಿ ಕನ್ನಡದ ಸತ್ಯಾಗ್ರಹಿಗಳು, ಕನ್ನಡ ಮುಖಂಡರು,ಕನ್ನಡದ ರಾಜಕೀಯ ಪಕ್ಷದ ನೇತಾರರು, ಕನ್ನಡ ಸೇವೆ ಗೈದಿರುವ ಜನಸಾಮಾನ್ಯರ ಭಾವಚಿತ್ರ, ಬದುಕು – ಬರೆಹ ಕುರಿತು ನಮ್ಮ ವಾಟ್ಸ್ ಪ್ ಗೆ ಕಳುಹಿಸಲು ತಮ್ಮ ತಮ್ಮ ಕುಟುಂಬಸ್ಥರು, ಸಮುದಾಯ, ಕುಟುಂಬದ ಪ್ರತಿನಿಧಿಗಳು ಈ ಪ್ರಕಟಣೆಯನ್ನು ಸಂಬಂಧ ಪಟ್ಟವರಿಗೆ ಮಾಹಿತಿಗಳನ್ನು ತಿಳಿಯಪಡಿಸಿ ಸಹಕರಿಸಲು ಮನವಿ ಮಾಡಲಾಗಿದೆ.


ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ರಂದು ನಡೆಯುವ ಕಾಸರಗೋಡು ಕನ್ನಡ ಗ್ರಾಮೋತ್ಸವದಲ್ಲಿ ಈ ಮಹನೀಯರ ಭಾವಚಿತ್ರಗಳನ್ನು ಪ್ರದರ್ಶಿಸಿ, ಗೌರವ ಸೂಚಿಸಲಾಗುವುದು.
ಅವರ ಕುಟುಂಬಸ್ಥರ ಒಬ್ಬರಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿ ಗೌರವಿಸಲು ಯೋಜನೆಯನ್ನು ಕೈಗೊಳ್ಳಲಾಗಿದೆ. ಸಂಬಂಧಪಟ್ಟವರು ತಮ್ಮ ಮಾಹಿತಿಗಳನ್ನು ವಾಟ್ಸ್ ಪ್ ಮೂಲಕ ಕಳುಹಿಸಿ ಸಹಕರಿಸಬಹುದು.


ಸಂಪರ್ಕ ವಿಳಾಸ:- ಶಿವರಾಮ ಕಾಸರಗೋಡು, ಸಂಸ್ಥಾಪಕ ಅಧ್ಯಕ್ಷರು,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ ),ಕನ್ನಡ ಗ್ರಾಮ, ಕಾಸರಗೋಡು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್
ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ, ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ ಕಾಸರಗೋಡು – 671121
ದಾರಿ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ರಸ್ತೆ ಮೀಪುಗುರಿ ಬಸ್ ಸ್ಟಾಪ್ – ಪಾರೆಕಟ್ಟೆ ಕನ್ನಡ ಗ್ರಾಮ ರಸ್ತೆ
ಮೊಬೈಲ್:9448572016,
9901951965

SHARE
Loading spinner

Leave a Reply

Your email address will not be published. Required fields are marked *

error: Content is protected !!