ಮಂಜೇಶ್ವರ : ಮಂಜೇಶ್ವರ ತಾಲೂಕು ವ್ಯಾಪ್ತಿಯ ಕಾಸರಗೋಡು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿರುವ ಟ್ರಕ್ ಪಾರ್ಕಿಂಗ್ ಪ್ರದೇಶದ ಸಮೀಪದಲ್ಲಿ 90 ಸೆಂಟಿಮೀಟರ್ ಎತ್ತರದಲ್ಲಿ ಬೆಳೆದ ಗಾಂಜಾ ಸಸ್ಯವನ್ನು ಕುಂಬಳ ಅಬಕಾರಿ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಅಬಕಾರಿ ಇಲಾಖೆಯ ಮಂಜೇಶ್ವರ ಶಾಖೆಯ ಇನ್ಸ್ಪೆಕ್ಟರ್ ಶ್ರಾವಣ್ ಕೆ.ವಿ ಹಾಗೂ ಅವರ ತಂಡ ಗಾಂಜಾ ಸಹಿತ ಪತ್ತೆಹಚ್ಚಿ, ಕಾನೂನು ಅನುಸಾರ ವಶಪಡಿಸಿಕೊಂಡು NDPS ಪ್ರಕರಣ ದಾಖಲಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಆರೋಪಿಗಳೆಂದೇ ಯಾರನ್ನೂ ಪ್ರಕರಣದಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ.
ಕಾರ್ಯಾಚರಣೆ ತಂಡದಲ್ಲಿ ಪ್ರಿವೆಂಟಿವ್ ಅಧಿಕಾರಿಯಾದ ಮನಾಸ್ ಕೆ.ವಿ ಮತ್ತು ಸಿವಿಲ್ ಎಕ್ಸೈಸ್ ಅಧಿಕಾರಿಗಳಾದ ರಂಜಿತ್ ಟಿ.ಕೆ, ಅಖಿಲೇಶ್ ಎಂ.ಎಂ, ಹಾಗೂ ರಾಹುಲ್ ಇ. ಅವರುಗಳು ಉಪಸ್ಥಿತರಿದ್ದರು