ಬಜಾಲ್ ಚರ್ಚ್‌ನ ನೂತನ ಧರ್ಮಗುರು ಫಾ. ಬೊನವೆಂಚರ್ ನಜ್ರತ್ ಅವರಿಗೆ ವಿವಿಧ ಸಂಘಸಂಸ್ಥೆಗಳಿಂದ ಅಭಿನಂದನೆ

ಬಜಾಲ್ ಚರ್ಚ್ ನ‌ ನೂತನ ಧರ್ಮಗುರುಗಳಾಗಿ ಇತ್ತೀಚಿಗೆ ಆಗಮಿಸಿದ ರೆ.ಫಾ.ಬೊನವೆಂಚರ್ ನಜ್ರತ್ ರವರನ್ನು ಬಜಾಲ್ ಪರಿಸರದ ವಿವಿಧ ಸಂಘಸಂಸ್ಥೆಗಳು ಸೌಹಾರ್ದ ಭೇಟಿ ನಡೆಸಿ ಬಳಿಕ ಅಭಿನಂದಿಸಲಾಯಿತು.

ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಹಾಗೂ ಅತ್ಯಂತ ಪ್ರಾಚೀನ ಚರ್ಚ್ ಗಳಲ್ಲಿ ಒಂದಾದ ಮಿಲಾಗ್ರಿಸ್ ಚರ್ಚ್‌ ನ ಧರ್ಮಗುರುಗಳಾಗಿ ಕಳೆದ ಹಲವಾರು ವರ್ಷಗಳ ಕಾಲ ಅತ್ಯಂತ ನಿಷ್ಠೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಫಾ.ಬೊನೆವೆಂಚರ್ ನಜ್ರತ್ ರವರು ತನ್ನ ವ್ಯಕ್ತಿತ್ವ ಹಾಗೂ ಸೇವೆಯ ಮೂಲಕ ಸರ್ವಧರ್ಮದ ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸಿದ್ದರು. ಹಾಗೂ ನಾಡಿನ ಶಾಂತಿ ಸೌಹಾರ್ದತೆಗಾಗಿ ಅವಿರತ ಶ್ರಮ ವಹಿಸಿದ್ದರು. ಅಂತಹ ಸೌಹಾರ್ದಪ್ರೇಮಿ ಶಾಂತಿದೂತರಾಗಿರುವ ಫಾ.ಬೊನವೆಂಚರ್ ನಜ್ರತ್ ರವರು ಬಜಾಲ್ ಚರ್ಚ್ ಗೆ ಆಗಮಿಸಿರುವುದು ಕೇವಲ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರವಲ್ಲ,ಪರಿಸರದ ಸರ್ವಧರ್ಮದ ಜನತೆಗೆ ಅತ್ಯಂತ ಹೆಮ್ಮೆಯ ಹಾಗೂ ಖುಷಿಯ ವಿಚಾರವಾಗಿದೆ ಎಂದು ಎಲ್ಲಾ ಸಂಘಸಂಸ್ಥೆಗಳು ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಸಂದರ್ಭದಲ್ಲಿ ಬಜಾಲ್ ಚರ್ಚ್ ನ‌ ಉಪಾಧ್ಯಕ್ಷರೂ, ಯುವವಕೀಲರಾದ ದೀಪಕ್ ಡಿಸೋಜ,ಜಿಲ್ಲೆಯ ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್,DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ಯಶ್ ರಾಜ್ ಬಜಾಲ್,ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ದೀಪಕ್ ಬಜಾಲ್ ಕಾರ್ಯದರ್ಶಿ ಅಶೋಕ್ ಎನೆಲ್ ಮಾರ್,DYFI ನಾಯಕರಾದ ಜಗದೀಶ್ ಬಜಾಲ್, ವರಪ್ರಸಾದ್ ಬಜಾಲ್ ಹಾಗೂ ಪಕ್ಕಲಡ್ಕ ಯುವಕ ಮಂಡಲದ ಮುಖಂಡರಾದ ವಿಲ್ಫ್ರೆಡ್ ಡಿಸೋಜರವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!