ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ನಡೆಯುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025.ವೇದಿಕೆಯಲ್ಲಿ ಆದರ್ಶ ಮಹಿಳೆ, ಮೇರು ಯಕ್ಷಗಾನ ಕಲಾವಿದೆ, ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ ದಿ. ಶ್ರೀಮತಿ ಗಾಯತ್ರಿ ನಾಗೇಶ್ ಇವರ ಸಂಸ್ಮರಣೆ -ನುಡಿನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ದಲ್ಲಿ ಗಾಯತ್ರಿ ನಾಗೇಶ್ ಇವರ ಬಗ್ಗೆ ಕಾಸರಗೋಡು ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ರಚಿಸಿದ “ಮರೆಯಲಾಗದವರು “ಎಂಬ ವ್ಯಕ್ತಿ ಚಿತ್ರಣ ಕೃತಿ ಬಿಡುಗಡೆ ಗೊಳಿಸಲಾಯಿತು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾಸಂಘ ಕಾಸರಗೋಡು ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀ ಲೋಕೇಶ್ ಕುಮಾರ್ ಅನಂಗೂರ್ ಪುಸ್ತಕ ವನ್ನು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಧ್ಯಕ್ಷರಾದ ಶ್ರೀ ನಾಗೇಶ್ ನಾಯಕ ಇವರೀಗೆ ನೀಡಿ ಬಿಡುಗಡೆ ಗೊಳಿಸಿದರು. ಕೃತಿಕರ್ತೆ ಸಂಧ್ಯಾರಾಣಿ ಟೀಚರ್ ಕೃತಿಯ ಬಗ್ಗೆ ಪರಿಚಯ ನೀಡಿದರು. ಕಾಸರಗೋಡು ನಗರಸಭೆಯ ಮಾಜಿ ಸದಸ್ಯೆ, ಕಲಾವಿದೆ ಜಯಶ್ರೀ ದಿವಾಕರ್ ಗಾಯತ್ರಿ ನಾಗೇಶ್ ಬಗ್ಗೆ ಸಂಸ್ಮರಣ ಭಾಷಣ ಮಾಡಿ “ಸಮಾಜಸೇವೆ ಮಾಡಿದವರನ್ನು ಸಮಾಜ ಗೌರವಿಸುತ್ತದೆ. ಹಾಗೂ ಗೌರವಿಸಬೇಕು. ಅದು ಔನತ್ಯದ ಸಂಸ್ಕೃತಿಯನ್ನು ಸುಚಿಸುತ್ತದೆ. ಪಾಂಗೋಡು ದೇವಸ್ಥಾನ ಪುನರ್ ನಿರ್ಮಾಣ ಪ್ರಕ್ರಿಯೆಯಲ್ಲಿ ಆರ್ಥಿಕ ಬೆನ್ನೆಲುಬಾಗಿ ಮುನ್ನೆಲೆಯಲ್ಲಿ ಕಾರ್ಯ ಪ್ರವೀತ್ತರಾಗಿದ್ದ ಗಾಯತ್ರಿಯವರು ಉತ್ತಮ ಕಲಾವಿದೆಯೂ, ಸ್ನೇಹ ಸಂಪನ್ನ, ಆದರ್ಶ ಮಹಿಳೆಯಗಿದ್ದರು, ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲ ಮಾದರಿ ಎಂದು ಹೇಳಿದರು.
ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದರು. ದುರ್ಗಾಪರಮೇಶ್ವರಿ ಸುಬ್ರಮಣ್ಯ ಮಹಿಳಾ ಭಜನಾ ಸಂಘ ಕೊರಕ್ಕೊಡು ಅಧ್ಯಕ್ಷೆ ಶೋಭಾ ಕೂಡ್ಲು, ಭಟ್ಟರಾಜ ಸ್ವಾಗತಿಸಿ ವಂದಿಸಿದರು.