ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳಲ್ಲಿ ಅಧಿಕಾರಿಗಳ ತೀವ್ರ ಕೊರತೆ . ಸಂಕಷ್ಟದಲ್ಲಿ ಗ್ರಾಮಸ್ಥರು.

ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಮಂಗಲ್ಪಾಡಿ , ವರ್ಕಾಡಿ ಗ್ರಾಮ ಪಂಚಾಯತು ಸೇರಿದಂತೆ ಇತರ ಸ್ಥಳೀಯಾಡಳಿತ ಸಂಸ್ಥೆಗಳ ಕಚೇರಿಗಳಲ್ಲಿ ಅಧಿಕಾರಿಗಳ ತೀವ್ರ ಕೊರತೆಯು ಕಂಡುಬರುತ್ತಿದ್ದು, ಈ ಪರಿಣಾಮವಾಗಿ ವಿವಿಧ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡ ಸ್ಥಿತಿಯಲ್ಲಿ ಉಳಿದಿವೆ. ಗ್ರಾಮಸ್ಥರು ಈ ಸ್ಥಿತಿಯಿಂದ ಸಂಕಷ್ಟಕ್ಕೀಡಾಗುತಿದ್ದು, ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಕಾರ್ಯದರ್ಶಿ ಹುದ್ದೆ ಕಳೆದ ಕೆಲವು ತಿಂಗಳಿಂದ ಖಾಲಿ ಬಿದ್ದಿದೆ. ಈ ಕಾರಣದಿಂದ ಹಲವು ಯೋಜನೆಗಳು ವಿಳಂಬಗೊಳ್ಳುತ್ತಿದೆ. ಇದೇ ರೀತಿ ಮಂಗಲ್ಪಾಡಿ ಪಂಚಾಯತಿನಲ್ಲಿ ಸಹ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಕಡತಗಳು ಅಧಿಕಾರಿಗಳ ಕೊರತೆಯಿಂದ ಮುಂದೆ ಸಾಗುತ್ತಿಲ್ಲ.ವರ್ಕಾಡಿ ಪಂಚಾಯತಿನ ಪಂಚಾಯತ್ ನಲ್ಲೂ ಅಧಿಕಾರಿಗಳ ಕುರ್ಚಿ ತಿಂಗಳುಗಳಿಂದ ಖಾಲಿಯಾಗಿದ್ದು, ಇಲ್ಲೂ ಹಲವು ಯೋಜನೆಗಳು ಸ್ಥಗಿತಗೊಂಡಿವೆ.

ಮಂಗಲ್ಪಾಡಿಯಲ್ಲೂ ಯೋಜನೆ ಘೋಷಣೆಯಾದರೂ, ಅದನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳೇ ಇಲ್ಲದೇ ಇರುವುದು ಗ್ರಾಮಸ್ಥರನ್ನು ಪರದಾಡುವಂತೆ ಮಾಡಿದೆ.ಆಧುನಿಕ ಆಡಳಿತ ವ್ಯವಸ್ಥೆಯಲ್ಲಿ ಇಂತಹ ಸಿಬ್ಬಂದಿ ಕೊರತೆ ಅಸಹ್ಯಕರ. ಜನಸಾಮಾನ್ಯರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆಂಬ ಆರೋಪ ವ್ಯಾಪಕವಾಗಿದೆ.

ಸ್ಥಳೀಯ ಆಡಳಿತದ ಹಂತದಲ್ಲಿ ಈ ರೀತಿಯ ಅಧಿಕಾರಿಗಳ ಕೊರತೆಯು ಜನಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾವುದೇ ಯೋಜನೆಯ ಯಶಸ್ಸು ಅದನ್ನು ಜವಾಬ್ದಾರಿಯಾಗಿ ಅನುಷ್ಠಾನಗೊಳಿಸುವ ಅಧಿಕಾರಿಗಳ ಮೇಲೆ ನಿಂತಿದೆ. ತ್ವರಿತ ಕ್ರಮದಿಂದ ಮಾತ್ರ ಈ ಪರಿಸ್ಥಿತಿಗೆ ಪರಿಹಾರ ಸಿಕ್ಕು ಅಭಿವೃದ್ಧಿಯ ಹಾದಿಗೆ ಗ್ರಾಮಗಳು ಮರಳಬಹುದು. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!