ಉಡುಪಿ: ಭಾರತದ ಪ್ರಮುಖ ಶಿಪ್‌ಯಾರ್ಡ್ ಆಗಿರುವ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಮಾಲೀಕತ್ವದ ಅಂಗಸಂಸ್ಥೆಯಾದ ಉಡುಪಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಕಂಪೆನಿಯು ಎಂ/ಸ್ ಓಷನ್ ಸ್ಪಾರ್ಕಲ್ ಲಿಮಿಟೆಡ್ ಗಾಗಿ ನಿರ್ಮಿಸುತ್ತಿರುವ ಮೂರು 70 ಟನ್ ಬೋಲಾರ್ಡ್ ಪುಲ್ ಟಗ್‌ಗಳ ಸರಣಿಯ ಮೊದಲ ನೌಕೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.
ಈ ಟಗ್‌ನ ಪ್ರಾರಂಭವನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ತಾಂತ್ರಿಕ ನಿರ್ದೇಶಕರು, ಉಡುಪಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಿದರು.ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಕೋಚಿನ್ ಶಿಪ್‌ಯಾರ್ಡ್ ಗುಂಪು ಹಾಗೂ ಉಡುಪಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಕೈಗೊಂಡ ಪ್ರಯತ್ನಗಳ ಬಗ್ಗೆ ಸಂಸದ ಪೂಜಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸರಣಿಯ ಮೂರು ಟಗ್‌ಗಳ ಜೊತೆಗೆ, ಎಂ/ಸ್ ಓಷನ್ ಸ್ಪಾರ್ಕಲ್ ಲಿಮಿಟೆಡ್ ಸಂಸ್ಥೆಯು ಉಡುಪಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ಗೆ ಇದೇ ವಿನ್ಯಾಸದ 8 ಟಗ್‌ಗಳ ಹೆಚ್ಚುವರಿ ಬೇಡಿಕೆ ಆದೇಶ ನೀಡಿದೆ. ಇವುಗಳ ವಿನ್ಯಾಸ ಪ್ರಕ್ರಿಯೆ ಪ್ರಸ್ತುತ ಪ್ರಗತಿಯಲ್ಲಿದೆ.ಈ ಕಾರ್ಯಕ್ರಮದಲ್ಲಿ ಎಂ/ಸ್ ಓಷನ್ ಸ್ಪಾರ್ಕಲ್ ಲಿಮಿಟೆಡ್‌ನ ಶ ಮೆರಿಯಾ ಆನ್ಸನ್ ಮತ್ತು ಪ್ರಸಂತ್ ನಾಯರ್, ಇಂಡಿಯನ್ ರಿಜಿಸ್ಟರ್ ಆಫ್ ಶಿಪ್ಪಿಂಗ್‌ನ ಸರ್ವೇಯರ್‌ಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪ್ರತಿನಿಧಿಗಳು, ಉಡುಪಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ವ್ಯಾಪಾರ ಸಹಭಾಗಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಟಗ್‌ಗಳು ವಿಶ್ವದ ಪ್ರಮುಖ ಹಾರ್ಬರ್ ಟಗ್ ವಿನ್ಯಾಸ ಸಂಸ್ಥೆಯಾದ ರಾಬರ್ಟ್ ಆಲನ್ ಲಿಮಿಟೆಡ್‌ನ ವಿನ್ಯಾಸದ ಆಧಾರದ ಮೇಲೆ ನಿರ್ಮಿಸಲ್ಪಟ್ಟಿವೆ. ಇವುಗಳನ್ನು ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ಯೋಜನೆಯನ್ನು ಉತ್ತೇಜಿಸುವ ಉದ್ದೇಶದಿಂದ ಅನುಮೋದಿತ “ಸ್ಟ್ಯಾಂಡರ್ಡ್ ಟಗ್ ಡಿಸೈನ್ ಮತ್ತು ಸ್ಪೆಸಿಫಿಕೇಶನ್‌ಗಳ ಪ್ರಕಾರ ನಿರ್ಮಿಸಲಾಗುತ್ತಿದೆ. ಉಡುಪಿ ಕೋಚಿನ್ ಶಿಪ್‌ಯಾರ್ಡ್ ಈ ಯೋಜನೆಯಡಿ ಮೊದಲ ಪ್ರಾಯೋಗಿಕ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ.