ಮಂಗಳೂರು: ತೋಟ ಬೆಂಗ್ರೆ ಅಳಿವೆ ಬಾಗಿಲು ಬಳಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯಲು, ಮೀನುಗಾರಿಕೆಗೆ ಹೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.ಮನೋಹರ್ ಪುತ್ರನ್ (53) ಮೃತ ವ್ಯಕ್ತಿ. ಬುಧವಾರ ಸಂಜೆ 6:30ಕ್ಕೆ ಈ ಘಟನೆ ನಡೆದಿದೆ.
ಇವರು ಬಲೆ ಹಾಕಿ ಮೀನು ಹಿಡಿಯಲು ಹೋದಾಗ ನೀರಿಗೆ ಬಿದ್ದು ಮೃತ ಪಟ್ಟಿರುತ್ತಾರೆ. ಬಳಿಕ ಸ್ಥಳೀಯರು ಹಾಗೂ ಪಣಂಬೂರು ಠಾಣಾ ಪೋಲಿಸ್ ಅಧಿಕಾರಿಗಳ ಸಹಾಯದಿಂದ ಹುಡುಕಾಟ ನಡೆಸಲಾಯಿತು. ಸುಮಾರು ರಾತ್ರಿ 9:30 ಸಮಯ ಮೃತದೇಹ ಪತ್ತೆಯಾಗಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.