ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ರಿಕ್ಷಾ ಚಾಲಕ ಅರೆಸ್ಟ್ .

ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ರಿಕ್ಷಾ ‍ಚಾಲಕನನ್ನು ಪಾಣೆಮಂಗಳೂರು ಎಂಬಲ್ಲಿ ಬಂಧಿಸಲಾಗಿದೆ. ಮೊಹಮ್ಮದ್ ಇಮ್ತಿಯಾಜ್, ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ನಗರ ಪೊಲೀಸರು ಪಾಣೆಮಂಗಳೂರು ಸ್ಮಶಾನ ರಸ್ತೆಯಲ್ಲಿ ರಿಕ್ಷಾದಲ್ಲಿ ಓರ್ವ ವ್ಯಕ್ತಿಯು ಅನುಮಾನಾಸ್ಪದವಾಗಿ ಇರುವ ಬಗ್ಗೆ ಮಾಹಿತಿ ಬಂದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಸ್ಮಶಾನದ ಪಕ್ಕ ಆಟೋ ರಿಕ್ಷಾವನ್ನು ನಿಲ್ಲಿಸಿದ್ದು ಕಂಡುಬಂದಿದೆ.

ರಿಕ್ಷಾದ ಒಳಗೆ ಚಾಲಕ ಸೀಟಿನಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆ ವ್ಯಕ್ತಿಯು ಈ ಹಿಂದೆ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾದ ಅ.ಕ್ರ 50/2025 ರಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೊಹಮ್ಮದ್ ಇಮ್ತಿಯಾಜ್ ಪ್ರಾಯ 40 ವರ್ಷ, ಬಂಟ್ವಾಳ ತಾಲೂಕು ಎಂಬವನಾಗಿದ್ದು, ಆತನನ್ನು ವಿಚಾರಿಸಿದಾಗ ನನ್ನ ಜೊತೆಯಲ್ಲಿ ಎಂ.ಡಿ.ಎಂ.ಎ ಇದ್ದು, ತಾನು ಅದನ್ನು ಸೇವಿಸಲು ಇಲ್ಲಿ ಬಂದಿರುವುದಾಗಿ ತಿಳಿಸಿದ್ದು, ಒಟ್ಟು 0.760 ಗ್ರಾಂ [760 ಮಿಲಿಗ್ರಾಂ] ಇರುತ್ತದೆ. ಸದ್ರಿ ಎಂ.ಡಿ.ಎಂ.ಎ ಮಾದಕ ಸ್ವತ್ತಿನ ಅಂದಾಜು ಮೌಲ್ಯ ರೂ. 1,000/- ಆಗಬಹುದು.

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ನಂ: 117/2025 ಕಲಂ :8 [c] 22(b) NDPS ACT 1985. ಯಂತೆ ಪ್ರಕರಣ ದಾಖಲಾಸಿಕೂಂಡು ಆತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!