ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಿಬೆಳೆಸಿ ಜೀವನವನ್ನೇ ಸಂಘಟನೆಗೆ ತೈದ ನಾಯಕ ಕೆ. ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರ ಉದ್ಘಾಟನೆ .

ವರ್ಕಾಡಿ ಪಂಚಾಯತಿನ ಕೊಡ್ಲಮೊಗರು ಪಾತೂರು ಗ್ರಾಮದಲ್ಲಿ ಸಿ ಪಿ ಐ ಎಂ ಪಕ್ಷದ ಸಂಘಟನೆಗಾಗಿ ಹಗಲಿರುಳು ಎನ್ನದೆ ದುಡಿದು ತನ್ನ ಜೀವನವನ್ನೇ ಜನರ ಹಿತಕ್ಕಾಗಿ ಮುಡಿಪಾಗಿರಿಸಿ ಹಲವಾರು ವರ್ಷಗಳ ಕಾಲ ಲೋಕಲ್ ಕಮಿಟಿ ಕಾರ್ಯದರ್ಶಿಯಾಗಿದ್ದ ಶ್ರೀಯುತ ಕೆ. ಪಕೀರ ಶೆಟ್ಟಿಗಾರ್ ರ ಸವಿ ನೆನಪಿಗಾಗಿ ಕೊಡ್ಲಮೊಗರು ಲೋಕಲ್ ಕಮಿಟಿಯವರು ಊರ ಪರವೂರ ದಾನಿಗಳ ಸಹಕಾರದಿಂದ ನಿರ್ಮಿಸಿದ ಸ್ಮಾರಕ ಮಂದಿರದ ಉದ್ಘಾಟನಾ ಸಮಾರಂಭವು ಅಕ್ಟೊಬರ್ -19 ರಂದು ನಡೆಯಿತು.

ಕೆ . ಪಕೀರ ಶೆಟ್ಟಿಗಾರ್ ಸ್ಮಾರಕ ಮಂದಿರವನ್ನು ಸಿ.ಪಿ. ಐ .ಎಂ ರಾಜ್ಯ ಕಾರ್ಯದರ್ಶಿಎಂ ಎಲ್ ಎ ಎಂ .ವಿ ಗೋವಿಂದ ಮಾಸ್ಟರ್ ರವರು ವಿಡಿಯೋ ಕಾಂಫೊರನ್ಸ್ ಮೂಲಕ ಉಪಸ್ಥಿತಿಯಲ್ಲಿ ಸಿ.ಪಿ. ಐ .ಎಂ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ ಎಲ್ ಎ ರಾಜಗೋಪಾಲ್ ಎಂ ಅವರು ಉದ್ಘಾಟಿಸಿದರು.ಸಿ ಪಿ ಐ ಎಂ ಸ್ಟೇಟ್ ಕಮೀಟಿ ಮೆಂಬರ್ ಅದ ಕೆ.ಪಿ ಸತೀಶ್ಚಂದ್ರನ್ ಧ್ವಜಾರೋಹಣ ಹಾಗೂ ಅಗಲಿದ ಹಿರಿಯ ಕಾರ್ಯಕರ್ತರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಸಿಪಿ ಐ ಎಂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಜಯಾನಂದ ಸ್ಮೃತಿ ಮಂಟಪವನ್ನು ಉದ್ಘಾಟಿಸಿದರು. ಕಚೇರಿಗೆ ಒದಗಿಸಿದ ಪೀಠೋಪಕರಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ರವರು ಉದ್ಘಾಟನೆಯನ್ನು ನೆರವೇರಿಸಿದರು. ಸಿಪಿ ಐ ಎಂ ಏರಿಯಾ ಸೆಕ್ರೆಟರಿ ವಿವಿ ರಮೇಶ್ ಏಕೋ-ಗಾರ್ಡ್ ನ್ನು ಉದ್ಘಾಟಿಸಿದರು.


ನೂತನ ಕಟ್ಟಡದ ಧ್ವನಿವರ್ಧಕ ವನ್ನು ಕರ್ನಾಟಕ ಸಿಪಿ ಐ ಎಂ ರಾಜ್ಯ ಸಮಿತಿ ಸದ್ಸ್ಯ ಸುನಿಲ್ ಕುಮಾರ್ ಬಜಾಲ್ ಉದ್ಘಾಟಿಸಿದರು.ಪಕ್ಷಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಹಿತೈಷಿಗಳ ಸಹಾಯದೊಂದಿಗೆ ಕೆ. ಪಕೀರ ಶೆಟ್ಟಿಗಾರ್ ಅವರು ಅಂದು ಜಾಗವನ್ನು ಖರೀದಿಸಿದ್ದರು.ಅದೇ ಜಾಗದಲ್ಲಿ ಸ್ಮಾರಕ ಮಂದಿರವನ್ನು ನಿರ್ಮಿಸಿದ್ದು ಮೋಹನ ಬಿ. ಚೇಯರ್ ಮ್ಯಾನ್ ಸ್ವಾಗತ ಸಮಿತಿ , ಕಾರ್ಯದರ್ಶಿ ಲೋಕಲ್ ಕಮಿಟಿ ಕೊಡ್ಲಮೊಗರು, ಶ್ರೀಮತಿ ಭಾರತಿ ಎಸ ಚೇಯರ್ ಮ್ಯಾನ್ ಕಟ್ಟಡ ನಿರ್ಮಾಣ ಸಮಿತಿ , ಜಯರಾಮ ಎನ್.ಕೆ ಸಂಚಾಲಕರು ಸ್ವಾಗತ ಸಮಿತಿ ಮತ್ತು ಕಟ್ಟಡ ನಿರ್ಮಾಣ ಸಮಿತಿ , ಡಿ. ಬೂಬ ಕೋಶಾಧಿಕಾರಿ ಕಟ್ಟಡ ನಿರ್ಮಾಣ ಸಮಿತಿ ಕಟ್ಟಡ ನಿರ್ಮಾಣಕ್ಕಾಗಿ ಬಹಳಷ್ಟು ಶ್ರಮ ವಹಿಸಿದ್ದಾರೆ . ಹಾಗೆ ಸಂಘಟನಾ ಸದಸ್ಯರ ಕನಸು ಸಾಕಾರಗೊಂಡಿದೆ . ಬಹಳ ಅಭುತ್ವಪೂರ್ವ ವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಚಲನ ಚಿತ್ರ ನಟ , ರಂಗ ಕಲಾವಿದ , ಮಿಮಿಕ್ರಿ ಕಲಾವಿದ ವಿಸ್ಮಯ ವಿನಾಯಕ್ ಇವರಿಂದ ಮಿಮಿಕ್ರಿ ಕಾರ್ಯಕ್ರಮ ಹಾಗೂ ಮಂಜೇಶ್ವರ ಏರಿಯಾ ಸಮಿತಿಯ ಬಾಲ ಸಂಘದ ಪ್ರತಿಭೆಗಳಿಂದ ಹಾಗೂ ಸಂಪ್ರೀತಿ ಡಾನ್ಸ್ ಟ್ರೂಪ್ ಪಾವಳ ಮತ್ತು ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವ್ಯವಿಧ್ಯ ಕಾರ್ಯಕ್ರಮ ನಡೆಯಿತು.

ಸ್ಮಾರಕ ಮಂದಿರದ ಉದ್ಗಾಟನಾ ಸಮಾರಂಭದಲ್ಲಿ ಪಾರ್ಟಿಯ ಸುಮಾರು 25 ರಷ್ಟು ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಹಾಗೂ ಕಟ್ಟಡ ನಿರ್ಮಾಣ ಕೆಲಸದಲ್ಲಿ ನಿರಂತರ ಶ್ರಮದಾನ ಮಾಡಿದ ಸದಸ್ಯರನ್ನು ಅಭಿನಂದಿಸಲಾಯಿತು.ಸಿಪಿ ಐ ಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕಾಂ. ವಿವಿ ರಮೇಶನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭಕ್ಕೆ ಸ್ವಾಗತ ಸಮಿತಿಯ ಚೇಯರ್ ಮೆನ್ ಮೋಹನ್ .ವಿ ಸ್ವಾಗತಿಸಿ ಚೇಯರ್ ಮ್ಯಾನ್ ಕಟ್ಟಡ ನಿರ್ಮಾಣ ಸಮಿತಿ ಹಾಗೂ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ಧನ್ಯವಾದ ವಿತ್ತರು.ವಿಜೆ ಶಶಿಕುಮಾರ್ ಕೂಳೂರು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!