ಬಾರ್ ಬಳಿ ಯುವಕರಿಗೆ ಚೂರಿ ಇರಿತ ಪ್ರಕರಣ .ಆರೋಪಿಗಳ ಜೊತೆ ಅಪರಾಧ ಕೃತ್ಯಕ್ಕೆ ಆಶ್ರಯ ನೀಡಿದವರ ಬಂಧನ .

ಮಂಗಳೂರು: ಬಾರ್ ಬಳಿ ಯುವಕರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅರೋಪಿಗಳ ಜೊತೆ ಅಪರಾಧ ಕೃತ್ಯಕ್ಕೆ ಆಶ್ರಯ ನೀಡಿದವರನ್ನೂ ಬಂಧಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾದ ಬಳಿಯಲ್ಲಿ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಆ. 23 ರಂದು ರಾತ್ರಿ ಸುಮಾರು 10-30 ಗಂಟೆಗೆ ಸುರತ್ಕಲ್ ಕಾನಾ ಬಳಿಯ ದೀಪಕ್ ಬಾರ್ ಬಳಿಯಲ್ಲಿ ಕ್ಷುಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಮತ್ತು ನಿಝಾಂ ಎಂಬ ಯುವಕರಿಬ್ಬರಿಗೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುರಾಜ್ ಆಚಾರಿ, ಅಲೆಕ್ಸ್ ಸಂತೋಷ್,ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿoದ ಇರಿದು ಕೊಲೆಗೆ ಯತ್ನಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಕಾನಾ ಸುರತ್ಕಲ್ ನಿವಾಸಿ ಸುಶಾಂತ್ ,ಕೆ ವಿ ಅಲೆಕ್ಸ್(27) ಹಾಗೂ ನಿತಿನ್(26) ಎಂದು ತಿಳಿದುಬಂದಿದೆ. ಜೊತೆಯಲ್ಲಿ ಆರೋಪಿಗಳಿಗೆ ಆಶ್ರಯ ಕೊಟ್ಟ ವ್ಯಕ್ತಿ ಆರುಣ್ ಶೆಟ್ಟಿ(56), ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಗುರುರಾಜ್ ಆಚಾರಿ ಹಾಗೂ ಆರೋಪಿಗಳಿಗೆ ಅರುಣ್ ಶೆಟ್ಟಿಯೊಂದಿಗೆ ಅಶ್ರಯ ನೀಡಿದ ಅಶೋಕ್ ಎಂಬಾತನು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!