ಮಂಜೇಶ್ವರ : ಕಳೆದ ಹಲವು ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿದ್ದ ಮಂಜೇಶ್ವರ ಕೆ.ಜೆ.ಎಂ. ರಸ್ತೆಗೆ ಕೊನೆಗೂ ಹೊಸ ಜೀವ ದೊರಕಿದೆ. ಮಂಜೇಶ್ವರ ಶಾಸಕರಾದ ಎ.ಕೆ.ಎಂ. ಅಶ್ರಫ್ ಅವರ ಅಭಿವೃದ್ಧಿ ನಿಧಿಯಿಂದ 97 ಲಕ್ಷ ರೂಪಾಯಿ ಮಂಜೂರಾಗಿದ್ದು, ಗುರುವಾರ ಈ ಮಹತ್ವದ ರಸ್ತೆ ಕಾಮಗಾರಿಗೆ ಅಧಿಕೃತ ಚಾಲನೆ ದೊರಕಿದೆ.
ಸುಮಾರು 1400 ಮೀಟರ್ ವಿಸ್ತೀರ್ಣದ ಈ ರಸ್ತೆ ನಿರ್ಮಾಣದಲ್ಲಿ 1100 ಮೀಟರ್ ಕಾಂಕ್ರೀಟ್ ರಸ್ತೆ ಹಾಗೂ 300 ಮೀಟರ್ ಡಾಮರು ರಸ್ತೆ ನಿರ್ಮಾಣವಾಗಲಿದೆ. ಜೊತೆಗೆ, ರಸ್ತೆ ನೀರು ನಿಲ್ಲದಂತೆ ಮಾಡಲು 250 ಮೀಟರ್ ಉದ್ದದ ಡ್ರೈನೇಜ್ ವ್ಯವಸ್ಥೆ ಸಹ ನಿರ್ಮಿಸಲಾಗುತ್ತಿದೆ.ಈ ಕಾಮಗಾರಿಯು ಮುಕ್ತಾಯವಾದ ಬಳಿಕ ಮಂಜೇಶ್ವರ, ಕೆ.ಜೆ.ಎಂ. ಮತ್ತು ಚೌಕಿ ಭಾಗದ ನಿವಾಸಿಗಳಿಗೆ ಸಂಚಾರದಲ್ಲಿ ಭಾರಿ ಸುಧಾರಣೆ ಸಿಗಲಿದೆ. ವರ್ಷಗಳ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರಾದ ಎ.ಕೆ.ಎಂ. ಅಶ್ರಫ್ ರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.ಕೆ ಜೆ ಎಂ ರಸ್ತೆ ಅಭಿವೃದ್ಧಿ ಮಂಜೇಶ್ವರದ ಸಮಗ್ರ ಅಭಿವೃದ್ಧಿಯತ್ತ ಮತ್ತೊಂದು ಹೆಜ್ಜೆಯಾಗಿ ಪರಿವರ್ತನೆಯಾಗಲಿದೆ