ರೂಪೇಶ್ ಶೆಟ್ಟಿ ನಿರ್ದೇಶನ ,ಅಭಿನಯದ ಹೊಸ ತುಳು , ಕನ್ನಡ ಚಿತ್ರ ಜೈ ನವೆಂಬರ್ 14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.ಬಾಲಿವುಡ್ ನ ಸುನಿಲ್ ಶೆಟ್ಟಿ ಪ್ರಪಥಮ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್ ,ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ಬಿಗ್ ಬಜೆಟ್ ನ ಈ ಸಿನಿಮಾ ಮಂಗಳೂರು ಹಾಗೂ ಸುತ್ತು ಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಿಸಿದ್ದಾರೆ. ಬಿಡುಗಡೆಗೂ ಮುನ್ನ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಆದಿತ್ಯವಾರ ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ ಜೈ ಚಿತ್ರದ ಭರ್ಜರಿ ಪ್ರೀಮಿಯರ್ ಶೋ ನೆರವೇರಿತು.ಈ ವೇಳೆ ನಿರ್ದೇಶಕ ರೂಪೇಶ್ ಶೆಟ್ಟಿ , ನಾಯಕಿ ಅದ್ವಿತಿ ಶೆಟ್ಟಿ , ನಟ ರಾಜ್ ದೀಪಕ್ ಶೆಟ್ಟಿ ಸೇರಿದಂತೆ ಹಲವಾರು ಕಲಾವಿದರು ಮತ್ತು ಅಭಿಮಾನಿಗಳು ಪ್ರೀಮಿಯರ್ ಷೋ ನಲ್ಲಿ ಭಾಗಿಯಾಗಿದ್ದರು . ಕಥೆ ಹಾಗೂ ಸಂಭಾಷಣೆ ಪ್ರಸನ್ನ ಶೆಟ್ಟಿ ಬೈಲೂರು ,ಕ್ಯಾಮೆರಾ ವಿನುತ್ ಕೆ ,ಸಂಗೀತ ಲೊಯ್ ವಾಲೆಂಟೈನ್ ಸಲ್ಡಾನಾ ,ಸಂಕಲನ ರಾಹುಲ್ ವಸಿಷ್ಠ ಅವರದ್ದು . ಈ ಚಿತ್ರದಲ್ಲಿ ಸ್ಥಳೀಯ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ .